Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಲಕ್ಷಾ೦ತರ ಭಕ್ತ ಜನಸ್ತೋಮದ ನಡುವೆ ಉಡುಪಿಯಲ್ಲಿ “ಶ್ರೀಕೃಷ್ಣಜನ್ಮಾಷ್ಟಮಿ”ಲೀಲೋತ್ಸವ ಸ೦ಪನ್ನ…

ಉಡುಪಿ: ಶ್ರೀಕೃಷ್ಣ ಜನ್ಮೋತ್ಸವದ ಸಡಗರ ಸಂಭ್ರಮದ ಕುರುಹಾಗಿ ವಿಟ್ಲಪಿಂಡಿ (ಮೊಸರುಕುಡಿಕೆ) ಮಹೋತ್ಸವ ಗುರುವಾರ ಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಾಂಪ್ರದಾಯಿಕ ಸಡಗರ ಉತ್ಸಾಹದಿಂದ ಸಂಭ್ರಮದಿಂದ ನೆರವೇರಿತು.

ಪರ್ಯಾಯ ಶ್ರೀಪಾದರು ಶ್ರೀಕೃಷ್ಣನಿಗೆ ವಜ್ರಕವಚ ಅಲಂಕಾರ ಮಾಡಿದ್ದರು.ಬೆಳಗ್ಗಿನ ಮಹಾಪೂಜೆ ಬಳಿಕ ಪಲ್ಲಪೂಜೆ ನಡೆದು ಭಕ್ತಾದಿಗಳಿಗೆ ಭೋಜನ ಪ್ರಸಾದ ವಿತರಿಸಲಾಯಿತು.

ಅದಾಗಲೇ ಪ್ರತ್ಯೇಕ ರಥದಲ್ಲಿ ಅನಂತೇಶ್ವರ- ಚಂದ್ರೇಶ್ವರ ದೇವರು ರಥಾರೂಢರಾಗಿದ್ದು, ಚಿನ್ನದ ರಥದಲ್ಲಿ ಮೃಣ್ಮಯ ಕೃಷ್ಣಮೂರ್ತಿಯನ್ನಿರಿಸಲಾಯಿತು. ಪರ್ಯಾಯ ಶ್ರೀಪಾದರು ಆರತಿ ಬೆಳಗಿದ ತರುವಾಯ ರಥೋತ್ಸವ ಆರಂಭಗೊಂಡಿತು.
ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉತ್ಸವದಲ್ಲಿ ಭಾಗವಹಿಸಿದ್ದರು.

ಗೊಲ್ಲ ವೇಷಧಾರಿಗಳಾಗಿ ಸಿದ್ಧರಾಗಿದ್ದ ಶ್ರೀಮಠದ ಗೋವಳರು ಅದಾಗಲೇ ರಥಬೀದಿಯ ಸುತ್ತಲೂ ನಿರ್ಮಿಸಿದ್ದ ಗುರ್ಜಿಗಳಲ್ಲಿ ಹಾಲು ಮೊಸರು ಬಣ್ಣದ ನೀರು ತುಂಬಿದ ಮಡಿಕೆಗಳನ್ನು ಒಡೆದು ಸಂಭ್ರಮಿಸಿದರು.ಲಕ್ಷಾ೦ತರ ಜನರು ಈ ಉತ್ಸವದಲ್ಲಿ ಭಾಗವಹಿಸಿದ್ದರು.

No Comments

Leave A Comment