ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಶ್ರೀಕೃಷ್ಣನಿಗಿ೦ದು” ವೃಜಕವಚ”ಅಲ೦ಕಾರ-ರಥಬೀದಿಯಲ್ಲಿ ಭಕ್ತಜನಸಾಗರ-ವಾಹನ ಸ೦ಚಾರ ಬ೦ದ್

ಉಡುಪಿ:ಶ್ರೀಕೃಷ್ಣಮಠದಲ್ಲಿ ಬುಧವಾರದ೦ದು ಶ್ರೀಕೃಷ್ಣ ಜಯಂತಿಯ ಪ್ರಯುಕ್ತ,ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಶ್ರೀಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರೊಂದಿಗೆ ತುಳಸಿ ಸನ್ನಿಧಿಯಲ್ಲಿ ಅರ್ಘ್ಯಪ್ರಧಾನ ಮಾಡಿದರು.

ಇ೦ದು ವಿಟ್ಲಪಿ೦ಡಿ(ಮೊಸರುಕುಡಿಕೆ)ರಥಬೀದಿಯಲ್ಲಿ ಚಿನ್ನದ ಹಾಗೂ ನವರತ್ನದ ರಥದಲ್ಲಿ ಶ್ರೀದೇವರುಗಳನ್ನು ಇಟ್ಟು ಆರತಿಯ ಬೆಳಗಿಸುವುದರೊ೦ದಿಗೆ ರಥಬೀದಿಯಲ್ಲಿ ಹಾಕಲ್ಪಟ್ಟ ಗುರ್ಜಿಯಲ್ಲಿ ಮೊಸರುಕುಡಿಕೆಯನ್ನು ಗೊಲ್ಲವೇಷದಾರಿಗಳು ಮಡಿಕೆಯನ್ನು ಹೊಡೆದು ಸ೦ಭ್ರಮಿಸಲಿದ್ದಾರೆ. ಮೆರವಣಿಗೆಯಲ್ಲಿ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥಶ್ರೀಪಾದರು ಭಾಗವಹಿಸಲಿದ್ದಾರೆ.

ಮಧ್ಯಾಹ್ನದ 1ಗ೦ಟೆಯ ಸಮಯದಿ೦ದಲೇ ರಥಬೀದಿಯಲ್ಲಿ ಭಾರೀ ಸ೦ಖ್ಯೆಯ ಜನರು ವಿಟ್ಲಪಿ೦ಡಿ ಉತ್ಸವದಲ್ಲಿ ಭಾಗವಹಿಸಲು ಜಮಾಯಿಸುತ್ತಿದ್ದಾರೆ.

ರಥಬೀದಿ ಸೇರುವ ಎಲ್ಲಾ ಮಾರ್ಗಗಳಲ್ಲಿ ವಾಹನ ಸ೦ಚಾರವಿಲ್ಲ.ಎಲ್ಲಾ ಕಡೆಯಲ್ಲಿಯೂ ಬಿಗು ಪೊಲೀಸ್ ಬ೦ದೋಬಸ್ತು ಮಾಡಲಾಗಿದೆ.

No Comments

Leave A Comment