Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸ೦ಭ್ರಮ-ಶ್ರೀಕೃಷ್ಣನಿಗಿ೦ದು “ಬೆಣ್ಣೆಕೃಷ್ಣ “ಅಲ೦ಕಾರ…ರಥಬೀದಿಗೆ ವ್ಯಾಪಕ ಭದ್ರತೆ

ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸ೦ಭ್ರಮ-ಶ್ರೀಕೃಷ್ಣನಿಗಿ೦ದು ಬುಧವಾರದ೦ದು ಬೆಣ್ಣೆಕೃಷ್ಣ ಅಲ೦ಕಾರವನ್ನು ಪರ್ಯಾಯ ಶ್ರೀಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಮಾಡಿರುವುದರ ನೋಟ.
ಶ್ರೀಕೃಷ್ಣಮಠದ ಒಳಾ೦ಗಣ ಸೇರಿದ೦ತೆ ಹೊರಭಾಗದಲ್ಲಿ ಮಠವನ್ನು ಹೂವಿನಿ೦ದ ಸು೦ದರವಾಗಿ ಶೃ೦ಗರಿಸಲಾಗಿದೆ.ಶ್ರೀಕೃಷ್ಣನ ದರ್ಶನಕ್ಕೆ ಉದ್ದನೇ ಸಾಲಿನಲ್ಲಿ ನಿ೦ತು ಭಕ್ತರು ದರ್ಶನವನ್ನು ಮಾಡುತ್ತಿರುವ ದೃಶ್ಯ ಕ೦ಡುಬ೦ದಿದೆ.ರಥಬೀದಿಯಲ್ಲಿ ಹೂವಿನ ಹಾಗೂ ಬಟ್ಟೆ-ಗೊ೦ಬೆಯ೦ಗಡಿಗಳು ಸೇರಿದ೦ತೆ ಇತರ ಸಣ್ಣ-ಸಣ್ಣವ್ಯಾಪಾರಿಗಳು ತು೦ಬಿಕೊ೦ಡಿದ್ದಾರೆ.ಮಳೆಯರಾಯನ೦ತೂ ಗ೦ಟೆಬಿಟ್ಟುಗ೦ಟೆಗೆ ಸ್ವಲ್ಪಮಟ್ಟಿನ ಮಳೆಯ ಹನಿಯನ್ನು ಬಾನ೦ಗಳದಿ೦ದ ಭೂಮಿಗೆ ಸುರಿಸಿ ತ೦ಪನ್ನು ಮಾಡುತ್ತಿದ್ದಾನೆ.ಸ೦ಜೆ ತರಕಾರಿ ಮುಹೂರ್ತವು ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಶ್ರೀಕೃಷ್ಣಮಠದಲ್ಲಿ,ಶ್ರೀಕೃಷ್ಣ ಜಯಂತಿಯ ಪ್ರಯುಕ್ತ, ದೇವರ ನೈವೇದ್ಯಕ್ಕಾಗಿ ಪರ್ಯಾಯ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಉಂಡೆಯನ್ನು ತಯಾರಿಸಲು ಚಾಲನೆ ನೀಡಿದರು.

ಮಾರ್ಪಳ್ಳಿ ಚೆ೦ಡೆಬಳಗದವರಿ೦ದ 18ನೇ ವರುಷದ ಹುಲಿವೇಷ ಪ್ರದರ್ಶನ…

No Comments

Leave A Comment