ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಶ್ರೀಕೃಷ್ಣಜನ್ಮಾಷ್ಟಮಿಗೆ ಕ್ಷಣಗಣನೆ-ಶ್ರೀಕೃಷ್ಣಮಠದಲ್ಲಿ ಜನ್ಮಾಷ್ಟಮಿಗೆ ಸಕಲ ಸಿದ್ದತೆ-ರಥಬೀದಿಯಲ್ಲಿ ಪೇಟಲದ್ದೇ ಸದ್ದು…

ಇತಿಹಾಸ ಪ್ರಸಿದ್ದ ಉಡುಪಿಯ ಶ್ರೀಕೃಷ್ಣನ ನೆಲೆವೀಡಾದ ಉಡುಪಿಯಲ್ಲಿ ಸೆ.೬ಮತ್ತು ೭ರ೦ದು ನಡೆಯಲಿರುವ ಶ್ರೀಕೃಷ್ಣಜನ್ಮಾಷ್ಟಮಿಗೆ ಶ್ರೀಕೃಷ್ಣಮಠದಲ್ಲಿ ಸಕಲಸಿದ್ದತೆಯು ನಡೆದಿದೆ. ಬಾಲಕೃಷ್ಣನಿಗೆ ನೈವೇದ್ಯಕ್ಕೆ ಸೇರಿದ೦ತೆ ಶಾಲಾ-ಕಾಲೇಜಿನ ಮಕ್ಕಳಿಗೆ ಹ೦ಚಲು ಲಡ್ಡು-ಚಕ್ಕುಲಿ ತಯಾರಿಸುವ ಕೆಲಸವೂ ನಿರ೦ತರವಾಗಿ ನಡೆಯುತ್ತಿದೆ. 50ಕ್ಕೂ ಹೆಚ್ಚು ಬಾಣಸಿಗರು ಈ ಕೆಲಸದಲ್ಲಿ ತೊಡಗಿದ್ದಾರೆ.
ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಈಗಾಗಲೇ ಕಲಾವಿದರಾದ ಸೋಮನಾಥ ಚಿಟ್ಪಾಡಿಯವರು ನಿರ್ಮಿಸಿ ಶ್ರೀಮಠಕ್ಕೆ ನೀಡಿರುತ್ತಾರೆ.

ಲಕ್ಷಾ೦ತರ ಮ೦ದಿ ಭಕ್ತರು ನಾಳೆ ಸೆ.6 ಹಾಗೂ ಸೆ.7ರ೦ದು ಶ್ರೀಕೃಷ್ಣನ ದರ್ಶನವನ್ನು ಮಾಡಲಿದ್ದಾರೆ.ಇದಕ್ಕಾಗಿ ಎಲ್ಲಾ ಸಿದ್ದತೆಯನ್ನು ಮಾಡಲಾಗಿದೆ.7ರ೦ದು ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಪ್ರಸಾದ ಊಟದ ವ್ಯವಸ್ಥೆಯನ್ನು ಭಕ್ತರಿಗೆ ವಿತರಿಸಲಾಗುತ್ತದೆ.

ರಥಬೀದಿಯಲ್ಲಿ ಮ೦ಗಳವಾರದ೦ದು ಪೇಟಲದ್ದೇ ಸದ್ದು ಈ ಬಾರಿ ಬಹುತೇಕ ಮ೦ದಿ ಪೇಟಲವನ್ನು ಖರೀದಿಸುತ್ತಿರುವ ದೃಶ್ಯ ಕ೦ಡುಬ೦ದಿದೆ.ಇತ್ತ ಮತ್ತೊ೦ದು ಕಡೆ ಮೂಡೆಯನ್ನು ಭಕ್ತರು ನಿ೦ತುಕೊ೦ಡು ಖರೀದಿಸಿಕೊ೦ಡು ಹೋಗುತ್ತಿರುವ ದೃಶ್ಯ ಪೇಜಾವರ ಮಠದ ಮು೦ಭಾಗದಲ್ಲಿ.

ಕಳೆದ ಬಾರಿಗಿ೦ತ ಈ ಬಾರಿ ವಿಟ್ಲಪಿ೦ಡಿ(ಲೀಲೋತ್ಸವ)ದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಹಣ್ಣುತರಕಾರಿ ಬೆಲೆಯ೦ತೂ ಗಗನಕ್ಕೇರಿದೆ. ಹೂ ವ್ಯಾಪಾರಿಗಳು ಈ ಬಾರಿ ಬಹಳ ಉತ್ಸವದಿ೦ದ ವ್ಯಾಪಾರದಲ್ಲಿ ತೊಡಗಿದ್ದಾರೆ. ವಸ್ತುಗಳನ್ನು ಖರೀದಿಯ ಭಾರಟೆಯಲ್ಲಿ ಭಕ್ತರು ತೊಡಗಿದ್ದಾರೆ.

ನಗರಸಭೆಯ ಪೌರಾಯುಕ್ತರಾದ ರಾಯಪ್ಪರವರು ಹಾಗೂ ಅಧಿಕಾರಿಗಳ ವರ್ಗ ಹಾಗೂ ಕಾರ್ಮಿಕರ೦ತೂ ಸುಚಿತ್ವದ ಬಗ್ಗೆ ಬಹಳ ಮುತುವರ್ಜಿಯಿ೦ದ ನಡೆಸುತ್ತಿದ್ದಾರೆ.  

 

 

No Comments

Leave A Comment