ಒಂದು ರಾಷ್ಟ್ರ, ಒಂದು ಚುನಾವಣೆ: ಕರ್ನಾಟಕ ಚುನಾವಣೆಯೇ ಕಾರಣ! ಜೂನ್‌ನಲ್ಲಿಯೇ ಸಿದ್ಧತಾ ಕಾರ್ಯ ಆರಂಭಿಸಿದ ಕೋವಿಂದ್!
ಮುಂಬೈ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಿದ್ದತಾ ಕಾರ್ಯವನ್ನು ಜೂನ್ ತಿಂಗಳಲ್ಲಿಯೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆರಂಭಿಸಿದ್ದಾರೆ. ಸಂಸತ್ತಿನ ಹೊಸ ಕಟ್ಟಡ ಉದ್ಘಾಟಿಸಿದ ನಾಲ್ಕು ದಿನಗಳ ನಂತರ ಜೂನ್ 2 ರಂದು ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಡಾ ಪಿ ಕೆ ಮಿಶ್ರಾ ಇಬ್ಬರು ಭೇಟಿಯಾಗಿದ್ದರು. ಈ ಸಭೆಯಲ್ಲಿ ಕೋವಿಂದ್ ನೇತೃತ್ವದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತಂತೆ ಮೊಟ್ಟ ಮೊದಲಿಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಇದು ಪ್ರಾರಂಭವಾಯಿತು. ಇದು ನಿಜವಾಗಿಯೂ ಪಕ್ಷವನ್ನು ಘಾಸಿಗೊಳಿಸಿತು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಸಂಖ್ಯಾಬಲದ ಬಗ್ಗೆ ಹೆಚ್ಚು ಚಿಂತಿಸುವಂತೆ ಮಾಡಿತು, ಆದ್ದರಿಂದ ಏಕಕಾಲಿಕ ಚುನಾವಣೆಯ ಆಸ್ತ್ರ ಪ್ರಯೋಗಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ಆದರೆ ಕೋವಿಂದ್ ಏಕೆ? ರಾಮನಾಥ್ ಕೋವಿಂದ್ ಅವರು ಕಾನೂನಿನಲ್ಲಿ ಪರಿಣತಿ ಹೊಂದಿದ್ದು, ಅಂತಹ ವಿಷಯಗಳನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೂ ಅಲ್ಲದೆ, ಮೋದಿ ಅವರಿಗೆ ನಂಬಿಕೆ ಇದೆ. “2024 ರ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಬಲವರ್ಧನೆಯನ್ನು ಸಡಿಲಗೊಳಿಸಲು ಏಕಕಾಲದಲ್ಲಿ ಚುನಾವಣೆಗೆ ಸಿದ್ಧಪಡಿಸುವಂತೆ ಮೋದಿ ಅವರು ತಮ್ಮ ವಿಶ್ವಾಸಾರ್ಹ ಪಕ್ಷದ ಕಾರ್ಯಕರ್ತರನ್ನು ಸದ್ದಿಲ್ಲದೆ ಕೇಳಿಕೊಂಡಿರುವುದಾಗಿ ಮೂಲಗಳು ಹೇಳಿವೆ.
ಶುಕ್ರವಾರ, ಕೋವಿಂದ್ ಅವರನ್ನು ಔಪಚಾರಿಕವಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆಯ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಅದರ ಸದಸ್ಯರ ಹೆಸರನ್ನು ಮರುದಿನ ಪ್ರಕಟಿಸಲಾಯಿತು. ಭಾನುವಾರ, ಸಮಿತಿಯ ಪೂರ್ವಸಿದ್ಧತಾ ಕಾರ್ಯಕ್ಕಾಗಿ ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿಗಳು ಕೋವಿಂದ್ ಅವರನ್ನು ಭೇಟಿಯಾದರು. ಆದರೆ ಜೂನ್ 2 ರಿಂದಲೂ ರಾಮನಾಥ್ ಕೋವಿಂದ್ ಈ ನಿಟ್ಟಿನಲ್ಲಿ ಪೂರ್ವಸಿದ್ಧತಾ ಕಾರ್ಯಗಳನ್ನು ಮಾಡುತ್ತಿದ್ದಾರೆ.