
ಬಿಜೆಪಿ ಯಾತ್ರೆಗೆ ಅಹ್ವಾನ ನೀಡಿದರೂ ಹೋಗುವುದಿಲ್ಲ: ಫ್ರೈರ್ ಬ್ರಾಂಡ್ ಉಮಾಭಾರತಿ!
ನವದೆಹಲಿ: ಮಧ್ಯಪ್ರದೇಶದಲ್ಲಿ ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಜಕ್ ಆಗಿ ಹೇಳಿದ್ದಾರೆ.
ಉಮಾಭಾರತಿ ಅವರ ಹೇಳಿಕೆ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದ್ದು, ಅವರು ಯಾತ್ರೆಯ ಸಮಯದಲ್ಲಿ ಹಾಜರಿದ್ದರೆ ಬಿಜೆಪಿ ನಾಯಕರು ಮುಜುಗರಕ್ಕೊಳಪಡಬೇಕಾಗುತ್ತದೆ ಎಂದು ಆಗ ಅಲ್ಲಿ ನೆರೆದಿದ್ದವರೆಲ್ಲರ ಗಮನ ನನ್ನ ಮೇಲೆ ಕೇಂದ್ರಿತವಾಗುತ್ತದೆ. ನಾನು ಅಲ್ಲಿದ್ದರೆ, ಇಡೀ ಸಾರ್ವಜನಿಕ ಗಮನವು ನನ್ನ ಮೇಲೆ ಬೀಳುತ್ತದೆ. ಇದರಿಂದ ನಾಯಕರು ಹೆದರುತ್ತಾರೆ” ಎಂದು 64 ವರ್ಷದ ಬಿಜೆಪಿ ನಾಯಕಿ ಉಮಾಭಾರತಿ ಹೇಳಿದ್ದಾರೆ.
ಇಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಹಿರಿಯ ನಾಯಕಿ ತಮ್ಮ ವಾಗ್ದಾಳಿ ಮುಂದುವರೆಸಿದ್ದು, ”ಆರಂಭದಲ್ಲಿ ನನಗೆ ಜನಾಶೀರ್ವಾದ ಯಾತ್ರೆಗೆ ಆಹ್ವಾನ ಬಂದಿರಲಿಲ್ಲ ನಿಜ.ಆದರೆ, ಆಮಂತ್ರಣ ಬಂದಿರೋ ಇಲ್ಲವೋ ನನಗೆ ಯಾವುದೇ ಪ್ರಾಮುಖ್ಯತೆ ಇಲ್ಲ, ಈಗ ಆಹ್ವಾನ ಬಂದರೆ ಹೋಗುವುದಿಲ್ಲ. ನಾನು ಸೆಪ್ಟೆಂಬರ್ 25 ರಂದು ಪ್ರಾರಂಭ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.