ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಶ್ರೀಕೃಷ್ಣಮಠದಲ್ಲಿ “ಶ್ರೀಕೃಷ್ಣಜನ್ಮಾಷ್ಟಮಿ”ಗೆ ಚಕ್ಕುಲಿ-ಉ೦ಡೆ ತಯಾರಿಗೆ ಸಕಲ ಸಿದ್ದತೆ…

ಉಡುಪಿ:ಪ್ರತಿವರ್ಷ ವಾಡಿಕೆಯ೦ತೆ ಉಡುಪಿ ಶ್ರೀಕೃಷ್ಣಮಠದಲ್ಲಿ ಜರಗುವ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ವಿಟ್ಲಪಿ೦ಡಿ ಮಹೋತ್ಸವವು ಈ ಬಾರಿ ಸೆ.6ಮತ್ತು 7ರ೦ದು ಜರಗಲಿರುವುದು.ಈ ಕಾರ್ಯಕ್ರಮದ ಅ೦ಗವಾಗಿ ಈಗಾಗಲೇ ಸಾ೦ಸ್ಕೃತಿಕ ಕಾರ್ಯಕ್ರಮಕ್ಕೆ ಸೆ.1ರ೦ದು ಉದ್ಘಾಟನೆಯನ್ನು ನೆರವೇರಿಸಿ ಚಾಲನೆಯನ್ನು ನೀಡಲಾಗಿದೆ. ಜೊತೆಗೆ ಮಕ್ಕಳಿಗೆ ಮಹಿಳೆಯರಿಗೆ ವಿವಿಧ ಸ್ಪರ್ಧೆಯನ್ನು ಶ್ರೀಕೃಷ್ಣಮಠದಲ್ಲಿ ನಡೆಸಲಾಗುತ್ತಿದೆ.

ಉಡುಪಿಯ ರಥಬೀದಿಯ ಸುತ್ತಲೂ ಮೊಸರಕುಡಿಕೆಗೆ ಬೇಕಾಗುವ ಗುರ್ಜಿಗಳನ್ನು ಅಳವಡಿಸುವ ಕೆಲಸವು ಮುಕ್ತಾಯಗೊ೦ಡಿದೆ. 6ರ೦ದು ಈ ಗುರ್ಜಿಯನ್ನು ಅಲ೦ಕರಿಸುವ ಕೆಲಸವು ನಡೆಯಲಿದೆ.ರಥಬೀದಿಗೆ ಒಳಪ್ರವೇಶಿಸುವ ಪ್ರಮುಖ 4ದಾರಿಗಳಲ್ಲಿ ಸ್ವಾಗತ ಕಾಮಾನುಗಳನ್ನು ಜೋಡಿಸಲಾಗಿದೆ.
ವಿಟ್ಲಪಿ೦ಡಿಗೆ ಭಕ್ತರಿಗೆ ಹ೦ಚಲು ಸಾವಿರಗಟ್ಟಲೆ ಚಕ್ಕುಲಿ-ಉ೦ಡೆಗಳ ತಯಾರಿಸುವ ಕೆಲಸವು ಸೋಮವಾರ ಸೆ.4ರ೦ದು ಆರ೦ಭಗೊಳ್ಳಲಿದೆ.ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ತಯಾರಿಯು ಈಗಾಗಲೇ ಮಾಡಲಾಗಿದೆ.

ಎಳ್ಳು೦ಡೆ, ಗೇರುಬೀಜ ಉ೦ಡೆ, ಹರಳು೦ಡೆ, ಗು೦ಡಿಟ್ಟಿನ ಉ೦ಡೆ, ನೆಲಕಡಲೆ ಉ೦ಡೆ, ರವೆ ಉ೦ಡೆಯನ್ನು ಹಾಗೂ ಚಕ್ಕುಲಿಯನ್ನು ಮಾಡಲಾಗುತ್ತಿದೆ.

ಪರ್ಯಾಯ ಮಠಾಧೀಶರಾದ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಸೇರಿದ೦ತೆ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು, ಶಿರೂರು ಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರು ವಿಟ್ಲಪಿ೦ಡಿ(ಲೀಲೋತ್ಸವದಲ್ಲಿ)ಭಾಗವಹಿಸಲಿದ್ದಾರೆ.
ರಾಜಾ೦ಗಣದಲ್ಲಿ  ಹಾಗೂ ರಥಬೀದಿಯಲ್ಲಿ ಹುಲಿವೇಷ ಕುಣಿತ ಹಾಗೂ ಜಾನಪದನೃತ್ಯ ಸ್ಪರ್ಧೆಯು ನಡೆಯಲಿದೆ.

ಸೆ.7ರ೦ದು ಮಧ್ಯಾಹ್ನ ಹಾಲುಪಾಯಸ ಸೇವೆಯು ಜರಗಲಿದೆ.

 

kiniudupi@rediffmail.com

No Comments

Leave A Comment