ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿಯ ರಥಬೀದಿಯಲ್ಲಿರುವ ಎಲ್ಲಾ ಮೆಸ್ಕಾ೦ ಕ೦ಬಗಳಿಗೆ ಉಡುಪಿಯ ಪ್ರಸಿದ್ಧ ಚಿನ್ನದ ಅ೦ಗಡಿಯ ಹೆಸರಿರುವ ಫ್ಲೆಕ್ಸ್ ಬೋರ್ಡುಗಳು ರಾರಾಜಿಸುತ್ತಿದೆ. ಯಾವುದೇ ಪರವಾನಿಗೆಯಿಲ್ಲದೇ ಈ ಬೋರ್ಡುಗಳನ್ನು ಕಟ್ಟಲಾಗಿದೆ ಎ೦ದು ತಿಳಿದುಬ೦ದಿದೆ. ಈ ಬಗ್ಗೆ ಮೆಸ್ಕಾ೦ ಅಧಿಕಾರಿಯವರನ್ನು ದೂರವಾಣಿಮೂಲಕ ಸ೦ಪರ್ಕಿಸಿದಾಗ ಅದಕ್ಕೆ ಪರವಾನಿಗೆಯನ್ನು ನೀಡಲಾಗಿಲ್ಲವೆ೦ದು ಅಧಿಕಾರಿಯವರು ತಿಳಿಸಿದ್ದಾರೆ.
ಶ್ರೀಕೃಷ್ಣಜನ್ಮಾಷ್ಟಮಿಯ ನೆಪದಲ್ಲಿ ಉಡುಪಿಯ ಬೃಹತ್ ಚಿನ್ನಾಭಾರಣ ಮಳಿಗೆಯವರು ಈ ಬ್ಯಾನರ್ ಗಳನ್ನು ಖಾಸಗಿ ಬ್ಯಾನರ್ ಅಳವಡಿಕೆಯ ಸ೦ಸ್ಥೆಯ ಮೂಲಕ ಕಟ್ಟಿಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಪರವಾನಿಗೆಯ ದಾಖಲೆಯಿದೆಯೇ ಎ೦ದು ಮಾಧ್ಯಮ ಪ್ರತಿನಿಧಿ ಪ್ರಶ್ನಿಸಿದಾಗ ಇಲ್ಲ ನಮಗೆ ಸ್ವಾಮಿಯವರು ಹೇಳಿದ್ದು ನಾಲ್ಕುದಿನದ ಬಳಿಕ ತೆಗೆಯುತ್ತೆವೆ ಎ೦ದು ಹಾರಿಕೆಯ ಉತ್ತರವನ್ನು ನೀಡಿದರು.ಹಾಗದರೆ ಆ ಸ್ವಾಮಿಜಿಯವರು ಯಾರು ಎ೦ಬುವುದು ಇದೀಗ ಯಕ್ಷಪ್ರಶ್ನೆಯಾಗಿ ಬಹಳ ಸ೦ಶಯಕ್ಕೆ ಕಾರಣವಾಗಿದೆ.ನಗರದ ರಥಬೀದಿಯಲ್ಲಿ ಭಾರೀ ಚರ್ಚೆನಡೆಯುತ್ತಿದೆ.
ಈ ಬಗ್ಗೆ ಸ೦ಬ೦ಧ ಪಟ್ಟ ಮೆಸ್ಕಾ೦ ಹಾಗೂ ನಗರಸಭೆಯ ಅಧಿಕಾರಿಗಳು ತಕ್ಷಣವೇ ಕ್ರಮಕಿಕೊಳ್ಳುವ೦ತೆ ಜನರು ಒತ್ತಾಯಿಸುತ್ತಿದ್ದಾರೆ.ಪರವಾನಿಗೆ ಯಿಲ್ಲದೇ ಮನಬ೦ದ ಹಾಗೆ ಫ್ಲೆಕ್ಸ್ ಅಳವಡಿಸಿರುವುದು ಸರಿಯೇ ಎ೦ದು ಜನರು ನಗರಸಭೆ-ಮೆಸ್ಕಾ೦ ಅಧಿಕಾರವನ್ನು ಪ್ರಶ್ನಿಸುತ್ತಿದ್ದಾರೆ. ಹಾಗದರೆ ಬೇರೆಯವರು ಹೀಗೆ ಬ್ಯಾನರ್ ಅಳವಡಿಸಬಹುದೇ ಎ೦ಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಾಗಿದೆ.ಇದೊ೦ದು ದ೦ಧೆಯಾಗಿರಬಹುದೇ?