Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಚಂದ್ರನಲ್ಲಿ ಸಲ್ಫರ್ ಇರುವುದನ್ನು ಪತ್ತೆ ಮಾಡಿದ ಪ್ರಜ್ಞಾನ್ ರೋವರ್

ಬೆಂಗಳೂರು: ಚಂದ್ರನ ಮೇಲ್ಮೈ ನಲ್ಲಿ ಸಲ್ಫರ್ ಇರುವುದನ್ನು ಪ್ರಜ್ಞಾನ್ ರೋವರ್ ನ ಮತ್ತೊಂದು ಉಪಕರಣ ದೃಢಪಡಿಸಿದೆ. ವಿಭಿನ್ನ ತಂತ್ರ ಬಳಸಿಕೊಂಡು ಸಲ್ಫರ್ ಇರುವಿಕೆಯನ್ನು ವಿಭಿನ್ನ ಪ್ರಜ್ಞಾನ್ ಪತ್ತೆ ಮಾಡಿರುವುದಾಗಿ ಇಸ್ರೋ ಹೇಳಿದೆ.

ಪ್ರಜ್ಞಾನ್ ರೋವರ್ ನಲ್ಲಿರುವ ಆಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪ್ (ಎಪಿಎಕ್ಸ್ ಎಸ್) ಚಂದ್ರನ ಮೇಲ್ಮೈ ನಲ್ಲಿ ಸಲ್ಫರ್ ಅಸ್ತಿತ್ವವನ್ನು ಹಾಗೂ ಇನ್ನಿತರ ಸಣ್ಣ ಅಂಶಗಳನ್ನು ಪತ್ತೆ ಮಾಡಿರುವುದಾಗಿ ಇಸ್ರೋ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

“ಚಂದ್ರಯಾನ-3 ರ ಈ ಸಂಶೋಧನೆಯು ಆ ಪ್ರದೇಶದಲ್ಲಿ ಸಲ್ಫರ್ (S) ಮೂಲಕ್ಕೆ ತಾಜಾ ವಿವರಣೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ದಾರಿಮಾಡಿಕೊಡುತ್ತದೆ ಎಂದು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ಬರೆದಿದೆ.

ಇದೇ ವೇಳೇ ಇಸ್ರೋ ಮೇಲ್ಮೈ ನಲ್ಲಿ ರೋವರ್ ಸುರಕ್ಷಿತ ದಾರಿಗಾಗಿ ಶೋಧ ಮಾಡುತ್ತಾ ಅಡ್ಡಾಡುತ್ತಿರುವ ವಿಡೀಯೋವನ್ನು ಸಹ ಇಸ್ರೋ ಬಿಡುಗಡೆ ಮಾಡಿದ್ದು, ಮಗುವೊಂದು ಚಂದಾಮಾಮನ ಅಂಗಳದಲ್ಲಿ ತಮಾಷೆಯಾಗಿ ಕುಣಿಯುತ್ತಿದ್ದು, ಅದನ್ನು ತಾಯಿ ಅಕ್ಕರೆಯಿಂದ ಗಮನಿಸುತ್ತಿರುವಂತಿದೆ? ಅಲ್ಲವೇ? ಎಂದು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.

ಬಾಹ್ಯಾಕಾಶ ಸಂಸ್ಥೆಯು 18 ಸೆಂ.ಮೀ ಎತ್ತರದ APXS ನ್ನು ತಿರುಗಿಸುವ ಸ್ವಯಂಚಾಲಿತ ಹಿಂಜ್ ಕಾರ್ಯವಿಧಾನವನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ.

26-ಕೆಜಿ, 6 ಚಕ್ರಗಳ, ಸೌರಶಕ್ತಿ ಚಾಲಿತ ಪ್ರಗ್ಯಾನ್ ರೋವರ್ ತನ್ನ ವೈಜ್ಞಾನಿಕ ಉಪಕರಣಗಳನ್ನು ಬಳಸಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮಣ್ಣು ಮತ್ತು ಬಂಡೆಗಳನ್ನು ಅಧ್ಯಯನ ಮಾಡಿ, ಇದು ಎತ್ತರದ ಪ್ರದೇಶಗಳಿಗೆ ಹೇಗೆ ವ್ಯತಿರಿಕ್ತವಾಗಿದೆ ಎಂಬ  ಮಾಹಿತಿಯನ್ನು ದಾಖಲಿಸಲು ಸಜ್ಜುಗೊಂಡಿದೆ.

No Comments

Leave A Comment