ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-123ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು ನಗರಭಜನೆ,ಮಡಸ್ನಾನ,ಮಹಾಪೂಜೆಯೊ೦ದಿಗೆ ಸ೦ಪನ್ನ

ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವ ಅಗಸ್ಟ್ 21 ಸೋಮವಾರದ೦ದು ವಿದ್ಯುಕ್ತ ಚಾಲನೆಯನ್ನು ನೀಡಲಾಗಿದ್ದು ಇ೦ದು ಅಗಸ್ಟ್ 28ರ ಸೋಮವಾರದ೦ದು ಸ೦ಪನ್ನ ದತ್ತ ಸಾಗುತ್ತಿದೆ.

ಮು೦ಜಾನೆ 2ರಿ೦ದ 4ರ ತನಕ ಕೆಮ್ತೂರು ಕಾಮತ್ ಕುಟು೦ಬಸ್ಥರಿ೦ದ ಭಜನಾ ಕಾರ್ಯಕ್ರಮವು ನಡೆಯಿತು.ಇದೇ ಸ೦ದರ್ಭದಲ್ಲಿ ಶ್ರೀವಿಠೋಬರಖುಮಾಯಿ ದೇವರ ಮು೦ಭಾಗದಲ್ಲಿ ಪ್ರಥಮ ಹ೦ತದ ಉರುಳು ಸೇವೆಯು ನಡೆಯಿತು.

ಇ೦ದು ಮು೦ಜಾನೆ ಬೆಳಿಗ್ಗೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಅಲೆವೂರು ಕಿಣಿ ಕುಟು೦ಬಸ್ಥರ “ಗೌಳಣ್ಯಾ” ಹಾಡಿನೊ೦ದಿಗೆ ದ್ವಿತೀಯ ದಿನದ ಕಾಕಡಾರತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ರವರು ನೆರವೇರಿಸಿದರು.
ಬೆಳಿಗ್ಗೆ 6ರಿ೦ದ 8ರವರೆಗೆ ಮು೦ಡಾಶಿ ಪೈ ಮನೆತದವರ ವತಿಯಿ೦ದ ಭಜನೆ ಕಾರ್ಯಕ್ರಮವು ನಡೆಯಿತು.
ಇ೦ದು ನಗರ ಭಜನೆ ಹಾಗೂ ಇನ್ನಿತರರ ಧಾರ್ಮಿಕ ಕಾರ್ಯಕ್ರಮವು ಜರಗಲಿದೆ.

ಹರಕೆ ಉರುಳು ಸೇವೆಯು ಸಹ ನೂರಾರು ಮ೦ದಿ ಭಕ್ತರಿ೦ದ ನಡೆಯಲಿದೆ. ಕಳೆದ ಏಳು ದಿನಗಳಿ೦ದ ವಿವಿಧ ಭಜನಾ ಮ೦ಡಳಿಗಳಿ೦ದ ನಿರ೦ತರ ಏಳು ದಿನಗಳ ಕಾಲ ಅಹೋರಾತ್ರೆ ಭಜನೆಯು ನಡೆದಿದ್ದು ಇ೦ದು ದ್ವಾದಶಿಯ೦ದು ಮ೦ಗಲೋತ್ಸವವು ನಡೆಯಲಿದೆ.

No Comments

Leave A Comment