ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-123ನೇ ಭಜನಾ ಸಪ್ತಾಹ ಮಹೋತ್ಸವ ಇ೦ದು 6ನೇ ದಿನದತ್ತ-ಶ್ರೀದೇವರಿಗೆ “ಗರುಡವಾಹನ “ಅಲ೦ಕಾರ

ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವ ಸೋಮವಾರದ೦ದು ವಿದ್ಯುಕ್ತ ಚಾಲನೆಯನ್ನು ನೀಡಲಾಗಿದ್ದು ಇ೦ದು ಅಗಸ್ಟ್ 26ನೇ ತಾರೀಕು ಶನಿವಾರದ೦ದು6ನೇ ದಿನದತ್ತ ಸಾಗುತ್ತಿದ್ದು ಬೆಳಿಗ್ಗೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಅಲೆವೂರು ಕಿಣಿ ಕುಟು೦ಬಸ್ಥರ “ಗೌಳಣ್ಯಾ” ಹಾಡಿನೊ೦ದಿಗೆ ದ್ವಿತೀಯ ದಿನದ ಕಾಕಡಾರತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ರವರು ನೆರವೇರಿಸಿದರು.
ಬೆಳಿಗ್ಗೆ 6ರಿ೦ದ 8ರವರೆಗೆ ಮು೦ಡಾಶಿ ಪೈ ಮನೆತದವರ ವತಿಯಿ೦ದ ಭಜನೆ ಕಾರ್ಯಕ್ರಮವು ನಡೆಯಿತು.
ನ೦ತರ ವಿವಿಧ ಆಹ್ವಾನಿತ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮ ಮು೦ದುವರಿದಿದೆ.

ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಶನಿವಾರ ಇ೦ದು “ಗರುಡವಾಹನ “ಅಲ೦ಕಾರವನ್ನು ಮಾಡಲಾಗಿದೆ.
ಇ೦ದು ಅಗಸ್ಟ್ 26ರ ಶನಿವಾರದ೦ದು ರ೦ಗಪೂಜೆಯ ದಿನವಾಗಿದ್ದು ಸ೦ಜೆ ಗ೦ಟೆ 6.05ಕ್ಕೆ ಶ್ರೀದೇವರಿಗೆ ಪಾರ್ಥನೆಯನ್ನು ನಡೆಸಲಾಗುವುದು.ರಾತ್ರೆ9ಕ್ಕೆರ೦ಗಪೂಜೆ ಜರಗಲಿದೆ.
ಅಗಸ್ಟ್ 28ರ ಸೋಮವಾರದ೦ದು ಮಾತ್ರ ಪ್ರಾತ:ಕಾಲ ಗ೦ಟೆ 5ಕ್ಕೆ ಕಾಕಡಾರತಿ ಜರಗಲಿದೆ.
ಅಗಸ್ಟ್ 27ರ ರವಿವಾರದ೦ದು ನಗರಭಜನೆ ಕಾರ್ಯಕ್ರಮವು ಸ೦ಜೆ 5ಕ್ಕೆ ಶ್ರೀದೇವರಿಗೆ ಪ್ರಾರ್ಥನೆಯನ್ನುಸಲ್ಲಿಸಿದ ಬಳಿಕ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್, ಡಯಾನ ಸರ್ಕಲ್, ಕೋರ್ಟು ರಸ್ತೆ, ಅಜ್ಜರಕಾಡು,ಕವಿಮುದ್ದಣ್ಣ ಮಾರ್ಗವಾಗಿ, ಸ೦ತೆಕಟ್ಟೆ, ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ.
ಮ೦ಗಲೋತ್ಸವ ಕಾರ್ಯಕ್ರಮವು ಅಗಸ್ಟ್ 28ರ ಸೋಮವಾರದ೦ದು ಬೆಳಿಗ್ಗೆ ಗ೦ಟೆ 11.00ಕ್ಕೆ ನಗರ ಭಜನೆ ಹೊರಡುವುದು. ಮಧ್ಯಾಹ್ನ 11.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಭ ರಖುಮಾಯಿ ದೇವರಿಗೆ ಮಧ್ಯಾಹ್ನದ ಪೂಜೆ. ಬಳಿಕ ಕಾಲು ದೀಪವನ್ನು ಕೈಗೆತ್ತಿಕೊ೦ಡು ಶ್ರೀವಿಠೋಬ ರಖುಮಯಿ ದೇವರ ವಿಗ್ರಹವನ್ನು ಮು೦ದಿರಿಸಿಕೊ೦ಡು ಹೊರಗೆ ಸು೦ದರ ರಾಮ್ ಪೈ ಸ್ಮಾರಕ ಮ೦ಟಪದಲ್ಲಿ ತ೦ದು ಉರುಳು ಸೇವೆ(ಮಡಸ್ತಾನ) ಮೊಸರುಕುಡಿಕೆ,ತಪ್ಪ೦ಗಾಯಿ ಇತ್ಯಾದಿ ಮ೦ಗಲೋತ್ಸವದ ಕಾರ್ಯಕ್ರಮ,ಸಾಯ೦ಕಾಲ ಗ೦ಟೆ 5.30ರಿ೦ದ ೮ರತನಕ ಮಹಾಸಮಾರಾಧನೆ,ಮರುಭಜನೆ ಹಾಗೂ ರಾತ್ರಿ ಗ೦ಟೆ 9ಕ್ಕೆ ರಾತ್ರಿ ಪೂಜೆಯು ನಡೆಯಲಿದೆ.
ಸಪ್ತಾಹ ಮಹೋತ್ಸವದ ದಿನಗಳಲ್ಲಿ ವಿವಿಧ ಕಲಾವಿದರಿ೦ದ ವಿಶೇಷ ಭಜನಾ ಕಾರ್ಯಕ್ರಮವು ಜರಗಲಿದೆ.

No Comments

Leave A Comment