Log In
BREAKING NEWS >
ನವೆ೦ಬರ್ 27ರ೦ದು ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಲಿದೆ...

ವಿಶ್ವಕಪ್ ಚೆಸ್ ಫೈನಲ್: ಪ್ರಗ್ನಾನಂದ – ಕಾರ್ಲ್‌ಸೆನ್ ನಡುವಿನ 2ನೇ ಪಂದ್ಯವೂ ಡ್ರಾನಲ್ಲಿ ಅಂತ್ಯ!

ಬಾಕು: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ಬುಧವಾರ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲೂ ಡ್ರಾ ಸಾಧಿಸಿದ್ದ ಇಬ್ಬರು ಗ್ರ್ಯಾಂಡ್‌ಮಾಸ್ಟರ್ ಗಳು ಇಂದು ತಮ್ಮ ಆಟವನ್ನು ಮುಂದುವರೆಸಿ 90 ನಿಮಿಷಗಳ ನಂತರ 30 ಚಲನೆಗಳಲ್ಲಿ ಶಾಂತವಾಗಿ ಆಟವಾಡಿ ಡ್ರಾ ಸಾಧಿಸಿದರು.

ಕಾರ್ಲ್‌ಸೆನ್ ಅವರು ಬಿಳಿ ಕಾಯಿಗಳೊಂದಿಗೆ ಆಟ ಆರಂಭಿಸಿದರು. ಪ್ರಗ್ನಾನಂದ ಅವರು ಕಪ್ಪು ಕಾಯಿಗಳೊಂದಿಗೆ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ. ಇಬ್ಬರ ಸಮಬಲದ ಹೋರಟದಿಂದಾಗಿ 30 ಚಲನೆಗಳ ಬಳಿಕ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

No Comments

Leave A Comment