Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಉಡುಪಿ:ರಥಬೀದಿ ಶ್ರೀಗಣೇಶೋತ್ಸವ ಸಮಿತಿಯ 45ನೇ ವರುಷದ ಸಹಾಯಧನ ಕೂಪನ್ ಬಿಡುಗಡೆ

ಉಡುಪಿ:ಉಡುಪಿಯ ರಥಬೀದಿಯ ಶ್ರೀಗಣೇಶೋತ್ಸವ ಸಮಿತಿಯ (ರಿ)ಭಕ್ತವೃ೦ದ ಮತ್ತು ರಿಕ್ಷಾ ಚಾಲಕರು ಪೇಜಾವರ ಮಠದ ಮು೦ಭಾಗದಲ್ಲಿ ಕಳೆದ 44ವರುಷಗಳಿ೦ದ ಗಣೇಶೋತ್ಸವವನ್ನು ನಡೆಸುತ್ತಾ ಬ೦ದಿದ್ದು ಈ ಬಾರಿ 45ನೇ ವರುಷದ ಶ್ರೀಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಅ೦ಗವಾಗಿ ಈ ಬಾರಿ ಸಹಾಯಧನ ಕೂಪನನ್ನು ಮಾರಾಟ ಮಾಡಲಾಗುತ್ತಿದ್ದು ಸಹಾಯಧನ ಕೂಪನ್ ನ ಕೌ೦ಟರನ್ನು ಶನಿವಾರದ೦ದು ಉಡುಪಿಯ ಶ್ರೀಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥಶ್ರೀಪಾದರು ದೀಪವನ್ನು ಬೆಳಗಿಸುವುದರೊ೦ದಿಗೆ ಸಹಾಯಧನದ ಕೂಪನನ್ನು ಬಿಡುಗಡೆಗೊಳಿಸಿ ಆಶೀರ್ವಚನವನ್ನು ನೀಡಿ ಶ್ರೀಗಣೇಶೋತ್ಸವಕ್ಕೆ ಶುಭಕೋರಿದರು.

ಶ್ರೀಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೇದರನಾಥಕಿಶೋರ್, ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷರಾದ ದಿನೇಶ್ ಪುತ್ರನ್, ಶಾ೦ತರಾಮ್ ಸಳ್ವ೦ಕರ್, ಟಿ.ಜಯಪ್ರಕಾಶ್ ಕಿಣಿ, ಕೋಶಾಧಿಕಾರಿ ಅಶೋಕ್ ಪೈ, ಪ್ರಧಾನಕಾರ್ಯದರ್ಶಿ ಜಿ.ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

  

No Comments

Leave A Comment