
‘ಪಿಎಂ ವಿಶ್ವಕರ್ಮ’ ಯೋಜನೆ, 32,500 ಕೋಟಿ ಮೌಲ್ಯದ ಹೊಸ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಅಸ್ತು
ನವದೆಹಲಿ: 13,000 ಕೋಟಿ ರೂಪಾಯಿ ಮೌಲ್ಯದ “ಪಿಎಂ ವಿಶ್ವಕರ್ಮ” ಯೋಜನೆ ಹಾಗೂ 32,500 ಕೋಟಿ ಮೌಲ್ಯದ ಹೊಸ ರೈಲ್ವೆ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಕೇಂದ್ರ ಸಂಪುಟ ಸಮಿತಿ ಮಂಗಳವಾರ ಅನುಮೋದನೆ ನೀಡಿದೆ.
ಪಿಎಂ ವಿಶ್ವಕರ್ಮ ಯೋಜನೆಯಿಂದ ದೇಶದ 30 ಲಕ್ಷ ಕರಕುಶಲಕರ್ಮಿಗಳಿಗೆ ಲಾಭವಾಗಲಿದೆ. ಅವರಿಗೆ ಕೇವಲ 5 ಪರ್ಸೆಂಟ್ ವಾರ್ಷಿಕ ಬಡ್ಡಿದರದಲ್ಲಿ 1 ಲಕ್ಷ ರೂ.ವರೆಗೂ ಮೊದಲ ಹಂತದ ಸಾಲ ಹಾಗೂ ಎರಡನೇ ಹಂತದಲ್ಲಿ 2 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು. ಯೋಜನೆಗಾಗಿ ಸರ್ಕಾರ 13,000 ಕೋಟಿ ರೂ. ಮಿಸಲಿಟ್ಟಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಈ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ, ಟೂಲ್ಕಿಟ್, ಡಿಜಿಟಲ್ ವಹಿವಾಟು, ಮಾರ್ಕೆಟಿಂಗ್ ಇತ್ಯಾದಿ ಪ್ರೋತ್ಸಾಹಗಳನ್ನು ಕರಕುಶಲಕರ್ಮಿಗಳಿಗೆ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.