Log In
BREAKING NEWS >
``````````````ನಮ್ಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿಗೆ ಕರಾವಳಿ ಕಿರಣ ಡಾಟ್ ಕಾ೦ನ ವತಿಯಿ೦ದ "ಚ೦ದ್ರಮಾನ ಯುಗಾದಿ"ಯ ಶುಭಾಶಯಗಳು `````````````

ಪಿಕೆಸಿ. ಪರ್ಕಳ ಕರಾಟೆ ಕ್ಲಬ್ ನೂತನ ಕಟ್ಟಡ ರಚನೆಗೆ ವಿಶೇಷ ಅನುದಾನ ಬಿಡುಗಡೆಗೆ ಮನವಿಗೆ ಸ್ಪಂದನೆ

ಉಡುಪಿ:ಪ್ರವೀಣಾ ಕರಾಟೆ ಕ್ಲಬ್ ಪ್ರರ್ಕಳ ಇದರ ಕರಾಟೆ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಗರಿಷ್ಠ ಅನುದಾನದ ಭರವಸೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು ಮನವಿಗೆ ಸ್ಪಂದಿಸಿದ ಹೆಬ್ಬಾಳ್ಕರ್ ರವರು ತಕ್ಷಣ ಕ್ರೀಡಾಇಲಾಖೆಯ ಮೂಖಾಂತರ
ಪ್ರರ್ಕಳ ಹೈಸ್ಕೂಲ್ ಬಳಿ ,ಸುರಕ್ಷಾ ಸಭಾ ಭವನದ ಎದುರು ನೂತನ ವಾಗಿ ಕಟ್ಟಡನಿರ್ಮಾಣ ಗೊಳ್ಳಲಿರುವ, ನೂತನ ಕಟ್ಟಡಕ್ಕೆ ಸುಮಾರು 20ಲಕ್ಷ ಬಿಡುಗಡೆಗೆ ಸಂಬಂಧ ಪಟ್ಟ ಕ್ರೀಡಾ ಇಲಾಖೆಯ ಮೂಲಕ ಮಂಜೂರು ಮಾಡಲು ತಕ್ಷಣ ಕ್ರಮಕೈಗೊಂಡು ನಮ್ಮ ಮನವಿಗೆ ಸ್ಪಂದಿಸಿದ್ದಾರೆ.

ಈ ಕಟ್ಟಡ ಎರಡುಮಾಳಿಗೆ ಹೊಂದಿದ್ದು.ಅಂದಾಜು 45ಲಕ್ಷ ವೆಚ್ಚ ತಗಲಿದೆ, ಊರಾಹಾಗೂ ಪರವೂರಾ ಮತ್ತು ಪೋಷಕರ ಸಹಕಾರ ಹಾಗೂ ಸ್ಥಳೀಯ ದಾನಿಗಳ ಸಹಕಾರದಿಂದ ಈ ನೂತನಕಟ್ಟಡ ರೂಪುಗೊಳ್ಳಲಿದೆ. ಈಗಾಗಲೇ ಪೋಷಕರು 5 ಸೆಂಟ್ಸ್ ಜಾಗ ಉಚಿತವಾಗಿ ನೀಡಿದ್ದಾರೆ. ಎಂದು ಅಂತಾರಾಷ್ಟ್ರೀಯ ಕರಾಟೆ ಪ್ರಶಸ್ತಿ ಪುರಸ್ಕೃತರಾದ ಪ್ರವೀಣ ಸುವರ್ಣ ರವರು ತಿಳಿಸಿದ್ದಾರೆ.

ಈ ಸಂದರ್ಭ ದಿಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭುಜಂಗ ಶೆಟ್ಟಿ. ಬ್ರಹ್ಮಾವರ, ಕಾಂಗ್ರೆಸ್ ನಾ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ, ಗಣೇಶ್ ಶೆಟ್ಟಿ ಕೀಳಂಜೆ.ಗಣೇಶ್ ರಾಜ್ ಸರಳೇಬೆಟ್ಟು. ಮಹೇಶ್ ಮಣೆಪಾಲ ಹಾಗೂ ಕರಾಟೆಯ ವಿದ್ಯಾರ್ಥಿಗಳು ಜೊತೆಗಿದ್ದರು..

No Comments

Leave A Comment