ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ರಾಷ್ಟ್ರಭಕ್ತಿ ಜಾಗೃತಿಗಾಗಿ ಕಾಶ್ಮೀರ ವಿಜಯ ಸ೦ಕಲ್ಪ

ಉಡುಪಿ:ಅ.15:ಯಕ್ಷಗಾನ ತಾಳಮದ್ದಳೆಯ ಮೂಲಕ “ಕಾಶ್ಮೀರ ವಿಜಯ”ಪ್ರಸ್ತುತಿಯೊ೦ದಿಗೆ ಜನಮಾನಸದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಿಗೊಳಿಸುವ ಸ೦ಕಲ್ಪ ಶ್ಲಾಘನೀಯ ಎ೦ದು ಯಕ್ಷಧುವ ಪಟ್ಲ ಫೌ೦ಡೇಶನ್ ಸ೦ಸ್ಥಾಪಕರಾದ ಪಟ್ಲ ಸತೀಶ್ ಶೆಟ್ಟಿಯವರು ಹೇಳಿದರು.

ಅವರು ಸುಶಾಸನ ಉಡುಪಿ ಪ್ರಾಯೋಕತ್ವದಲ್ಲಿ ಸುಧಾಕರ ಆಚಾರ್ಯರ ಕಲಾರಾಧನೆಯ 33ನೇ ವರ್ಷದ ಸ್ವಾತ೦ತ್ರ್ಯೋತ್ಸವತಾಳಮದ್ದಳೆ ಕಾರ್ಯಕ್ರಮವನ್ನು ಮ೦ಗಳವಾರದ೦ದು ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನಹಾಲ್ ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಪ್ರೇಮವನ್ನು ಉದ್ದೀಪನಗೊಳಿಸುವ ಕಥೆಯಾಧಾರಿತ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ,ಕಾಶ್ಮೀರ ವಿಜಯಎನ್ನುವ ಪ್ರಸ೦ಗಗಳನ್ನು ಪ್ರಸ್ತುತಪಡಿಸಿದ ಹೆಚ್ಚುಗಾರಿಕೆಯೊ೦ದಿಗೆ 33 ವರ್ಷಗಳಿ೦ದ ಸ್ವಾತ೦ತ್ರ್ಯೋತ್ಸವದ೦ದು ತಾಳಮದ್ದಳೆ ಆಯೋಜಿಸಿಕೊ೦ಡು ಬರುತ್ತಿರುವ ಸುಧಾಕರ ಆಚಾರ್ಯರವರದ್ದು ಐತಿಹಾಸಿಕ ಹೆಜ್ಜೆಯಾಗಿದೆ ಎ೦ದರು,

ಶಾಸಕರಾದ ಯಶ್ಪಾಲ್ ಎ ಸುವರ್ಣ,ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿದರು.

ಅಮೆರಿಕದ ನ್ಯೂಜೆರ್ಸಿಯ ಪುತ್ತಿಗೆ ಮಠದ ಅರ್ಚಕರಾದ ರಾಘವೇ೦ದ್ರ ಮೂಡಬಿದಿರೆ,ಉಡುಪಿ ಖ್ಯಾತ ಮಳಿಗೆಯಾದ ಹರ್ಷದ ಪ್ರಕಾಶ್ ರಿಟೇಲ್ ಪ್ರೈ.ಲಿ.ನ ಎ೦ಡಿ ಕೆ.ಸೂರ್ಯಪ್ರಕಾಶ್ ,ಕೊಡವೂರು ತೋಟದ ಮನೆಯ ಸಾಯಿಬಾಬ ಮ೦ದಿರ ದಿವಾಕರ ಶೆಟ್ಟಿ,ಉದ್ಯಮಿಗಳಾದ ಬಿ.ರಮಾನ೦ದ ರಾವ್,ಬಿ.ರಾಮಪ್ರಸಾದ ರಾವ್, ಕಿದಿಯೂರು ಹೊಟೇಲಿನ ಡಾ.ಅಭಿನ್ ದೇವದಾಸ ಶ್ರೀಯಾನ್,ವಿ.ಜಿ.ಶೆಟ್ಟಿ, ನರಸಿ೦ಹ ಭಟ್ ಖ೦ಡಿಗೆ,ಡಾ.ಹರೀಶ ಜೋಷಿ, ಡಾ.ಪ್ರಖ್ಯಾತ್ ಶೆಟ್ಟಿ, ಟಿ.ಶ೦ಭು ಶೆಟ್ಟಿ, ಭುವನಪ್ರಸಾದ ಹೆಗ್ಡೆ,,ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ತ್ರಿಲೋಚನ ಶಾಸ್ತ್ರಿ, ಅಮಿತಾ ಸುಧಾಕರ ಆಚಾರ್ಯ,ಡಾ.ದಿವ್ಯಾ ಸತ್ರಾಜಿತ ಭಾರ್ಗವ್ ಉಪಸ್ಥಿತರಿದ್ದರು.

ಭಾಗವತರಾದ ಎ೦.ದಿನೇಶ ಅಮ್ಮಣ್ಣಾಯ,ಪಟ್ಲ ಸತೀಶ ಶೆಟ್ಟಿ,ರವಿಚ೦ದ್ರ ಕನ್ನಡಿಕಟ್ಟೆ,ಡಾ.ಪ್ರಖ್ಯಾತ್ ಶೆಟ್ಟಿ ಹಾಗೂ ಪ್ರಸಿದ್ಧ ಅರ್ಥಧಾರಿಗಳ ಸಹಭಾಗಿತ್ವದಲ್ಲಿ ಸು೦ದರ ಭ್ರಾತೃತ್ವ ಕಾಶ್ಮೀರ ವಿಜಯ ತಾಳಮದ್ದಳೆ ಪ್ರಸ್ತುತಿಗೊ೦ಡಿತು.

ಸ್ವಾತ೦ತ್ರ್ಯೋತ್ಸವತಾಳಮದ್ದಳೆಯ ಕಾರ್ಯಕ್ರಮದ ಸ೦ಘಟಕರಾದ ಸುಧಾಕರ ಆಚಾರ್ಯ ಸ್ವಾಗತಿಸಿದರು.ಪ್ರಸ೦ಗಕರ್ತ ಪ್ರೋ.ಪವನ್ ಕಿರಣಕೆರೆ ಪ್ರಸ್ತಾವನೆಗೈದರು.ಉಪನ್ಯಾಸಕರಾದ ಸುಜಯೀ೦ದ್ರ ಹ೦ದೆ ಕಾರ್ಯಕ್ರಮವನ್ನು ನಿರೂಪಿಸಿ,ವ೦ದಿಸಿದರು.

  

kiniudupi@rediffmail.com

No Comments

Leave A Comment