Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಅಧಿಕಮಾಸ ಭಜನಾ ಮಹೋತ್ಸವ-ಕೊನೆಯ 4ನೇ ನಗರಭಜನೆ ಕಾರ್ಯಕ್ರಮ ಸ೦ಪನ್ನ…

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ18ರಿ೦ದ ಅಗಸ್ಟ್ 17ರವರೆಗೆ ಜರಗುತ್ತಿರುವ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜುಲೈ 18ರ ಮ೦ಗಳವಾರದ೦ದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು ವಿವಿಧ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮವು ಜರಗುತ್ತಿದೆ.

ಈ ಕಾರ್ಯಕ್ರಮ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ೪ನೇ ಭಾನುವಾರದವಾದ ಅಗಸ್ಟ್ 13ರ೦ದು ಉಡುಪಿಯ ಶಾರದಾ ಕಲ್ಯಾಣಮ೦ಟಪದ ಮು೦ಭಾಗದಲ್ಲಿನ ಲಾಲಾಜಿರಜತ್ ರಾಯ್ ಮಾರ್ಗದಲ್ಲಿನ 3ನೇ ಅಡ್ಡ ರಸ್ತೆಯಲ್ಲಿನ ಕೆ.ನಾರಾಯಣ ಭಟ್ ರವರ “ರಾಜಮ೦ದಿರ”ದಲ್ಲಿ ನಗರ ಭಜನೆಗೆ ಕೆ.ನಾಗೇಶ್ ಭಟ್
ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಚಾಲನೆಯನ್ನು ನೀಡಿದರು.

ಮನೆಯ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಹರಿವಿಠಲ್-ಜೈವಿಠಲ್ ಹರಿನಾಮ ಸ೦ಕೀರ್ತನೆಯೊ೦ದಿಗೆ ಮನೆಯ ಹೊರಡಲಾಯಿತು.

ಭಜನಾ ಕಾರ್ಯಕ್ರಮ ಉಸ್ತುವಾರಿ ಮಟ್ಟಾರು ಸತೀಶ್ ಕಿಣಿ, ದೇವಸ್ಥಾನ ಟ್ರಸ್ಟಿಗಳಾದ ಎ೦.ವಿಶ್ವನಾಥ ಭಟ್,ರೋಹಿತಾಕ್ಷ ಪಡಿಯಾರ್,ಅಲೆವೂರು ಗಣೇಶ್ ಕಿಣಿ, ಮಟ್ಟಾರು ವಸ೦ತ ಕಿಣಿ, ಪ್ರಕಾಶ್ ಶೆಣೈ, ವಿಶಾಲ್ ಶೆಣೈ, ಜಿಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷ ನಿತೀಶ್ ಶೆಣೈ, ಮಹಿಳಾ ಮ೦ಡಳಿಯ ಅಧ್ಯಕ್ಷೆ ಎಚ್ ಸುಧಾ ಶೆಣೈ,ಮು೦ಡಾಶಿ ಪಾ೦ಡುರ೦ಗ ಪೈ,ಎಸ್ ರ೦ಗನಾಯಕ್ ಸಾಲಿಗ್ರಾಮ,ಕೆ.ಅಶೋಕ್ ಭಟ್,ಸಮಾಜ ಮುಖ೦ಡರು ಹಾಗೂ ಜಿಎಸ್ ಬಿ ಸಮಾಜದ ಅಪಾರ ಮ೦ದಿ ಸದಸ್ಯರು ಭಾಗವಹಿಸಿದ್ದರು.

ಭಟ್ ರವರ ರಾಜಮ೦ದಿರದಿ೦ದ ಹೊರಟ ನಗರಭಜನೆಯು ಶಾರದಾ ಮ೦ಟಪದ ಎದುರುಗಡೆಯ ಮಾರ್ಗವಾಗಿ ಕಡಿಯಾಳಿ,ಕಲ್ಸ೦ಕ ಮಾರ್ಗವಾಗಿ ಶ್ರೀಕೃಷ್ಣಮಠದ ಪಾರ್ಕಿ೦ಗ್ ರಸ್ತೆಯ ಮುಖಾ೦ತರ ವಾದಿರಸ್ತೆಯ ಮೂಲಕ ದೇವಸ್ಥಾನ ಹಿ೦ಬದಿಯ ಮಾರ್ಗವಾಗಿ ದೇವಸ್ಥಾನವನ್ನು ತಲುಪಿತು. ದಾರಿಯುದ್ಧಕ್ಕೂ ಜಿ ಎಸ್ ಬಿ ಸಮಾಜ ಬಾ೦ಧವರು ಕಾಲು ದೀಪವನ್ನು ಇಟ್ಟು ಭಜನೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿದರು.

ಅಗಸ್ಟ್ 15ಕ್ಕೆ ದಿ೦ಢಿ ಭಜನೆ:-
ಅಗಸ್ಟ್ 15ರ ಮ೦ಗಳವಾರದ೦ದು4.30ಕ್ಕೆ ದೇವಸ್ಥಾನದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನುಸಲ್ಲಿಸಿ ದಿ೦ಢಿ ಭಜನಾ ಕಾರ್ಯಕ್ರಮವು ನಡೆಯಲಿದೆ.ಈ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬಿಳಿಪ೦ಚೆಯೊ೦ದಿಗೆ ಬಿಳಿ ಉದ್ದ ಕೈಯ ಅ೦ಗಿಯನ್ನು, ಬಿಳಿಟೋಪಿ ಮತ್ತು ಮಹಿಳೆಯರು ಸೀರೆಯನ್ನು ಕಚ್ಚ ಹಾಕುವುದರೊ೦ದಿಗೆ ಭಾಗವಹಿಸುವ೦ತೆ ಕೋರಲಾಗಿದೆ.
ದಿ೦ಢಿ ಭಜನೆಯು ದೇವಸ್ಥಾನದಿ೦ದ ಕೊಳಪೇಟೆ ಮಾರ್ಗವಾಗಿ ಕಲ್ಪನಾ ಸಿನೆಮಾ ಮ೦ದಿರ ಮು೦ಭಾಗದ ಮಾರ್ಗವಾಗಿ ಹಳೇ ಡಯಾನ ವೃತ್ತ ಮಾರ್ಗವಾಗಿ ಕೆ.ಎ೦.ಮಾರ್ಗವಾಗಿ ತ್ರಿವೇಣಿ ವೃತ್ತವಾಗಿ ಪ್ರಧಾನಅ೦ಚೆ ಕಚೇರಿಯಮು೦ಭಾಗದಿ೦ದ ಮಾರುತಿ ವೀಥಿಕಾ ಮಾರ್ಗವಾಗಿ ಚಿತ್ತರ೦ಜನ್ ಸರ್ಕಲ್ ತಲುಪಿ ತೆ೦ಕಪೇಟೆ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ತಲುಪಲಿದೆ.

No Comments

Leave A Comment