ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಕಾಪು ಮಹಾದೇವಿಶಾಲೆಯಲ್ಲಿ ಆರೋಗ್ಯಭಾರತಿ ಶಾಲಾ ಕಾರ್ಯಕ್ರಮ- ಔಷಧೀಯ ಸಸ್ಯ ವಿತರಣೆ
ಉಡುಪಿ:ಕಾಪು ಶ್ರೀ ಮಹಾದೇವಿ ಪ್ರೌಢಶಾಲೆಯಲ್ಲಿ ನಡೆದ ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಶಾಲಾ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಭಾರತಿಯ ಕಾಪು ತಾಲೂಕು ಘಟಕ ಮತ್ತು ಕಾಪು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬಾಲೋಪಚಾರ ಕೈಪಿಡಿ ವಿತರಿಸುವುದರೊ೦ದಿಗೆ ಔಷಧೀಯ ಸಸ್ಯಗಳನ್ನು ನೆಡಿಸಲಾಯಿತು.
ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಭಾಕರ ಭಟ್ ಅವರು ಆರೋಗ್ಯ ಭಾರತಿಯ ಕಾರ್ಯಸಾಧನೆಗಳನ್ನು ವಿವರಿಸಿದರು.
ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಡಾ.ಸದಾನಂದ ಭಟ್ಟರು ಔಷಧೀಯ ಸಸ್ಯಗಳ ಮಾಹಿತಿ ನೀಡಿದರು . ಕಾಪು ರೋಟರಿ ಅಧ್ಯಕ್ಷರಾದ Rtn ರಾಜೇಂದ್ರನಾಥ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ Rtn ಶ್ರೀನಿವಾಸ್ ರಾವ್ Rtn ಬಾಲಕೃಷ್ಣ ಆಚಾರ್ಯ Rtn ಮಾಧವ ಸಾಲಿಯಾನ್ Rtn Dr ಸದಾನಂದ ಭಟ್ Rtn ಸದಾಶಿವ ಭಟ್ Rtn ವಿದ್ಯಾಧರ್ ಪುರಾಣಿಕ್
ಕಾರ್ಯದರ್ಶಿ Rtn ವೇಣು ಕೃಷ್ಣ Dr ನಿರಂಜನ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತಿಯವರು ಸ್ವಾಗತಿಸಿದರು. ಶಿಕ್ಷಕರಾದ Rtn ಗೋಪಾಲ ನಾಯ್ಕ್ ಅವರು ಕಾರ್ಯಕ್ರಮ ನಿರೂಪಿಸಿದರು . ಸುಮಾರು ೧೦೦ ವಿದ್ಯಾರ್ಥಿಗಳು , ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು .