ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಚಿರನಿದ್ರೆಗೆ ಜಾರಿದ ಸ್ಪಂದನ: ಪತಿ ವಿಜಯ್ ರಾಘವೇಂದ್ರ, ಕುಟುಂಬಸ್ಥರು, ರಾಜಕಾರಣಿಗಳು, ಕಲಾವಿದರಿಂದ ಕಣ್ಣೀರ ಅಂತಿಮ ನಮನ
ಬೆಂಗಳೂರು: ಸ್ಯಾಂಡಲ್ವುಡ್ ನಟ ವಿಜಯರಾಘವೇಂದ್ರ (Vijay Raghavendea) ಪತ್ನಿ ಸ್ಪಂದನಾ ವಿಜಯರಾಘವೇಂದ್ರ (Spandana Vijay Raghavendra ) ಅವರ ಮೃತದೇಹದ ಅಂತಿಮ ದರ್ಶನ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಅವರ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ಸಾಗುತ್ತಿದೆ.
ಕರ್ನಾಟಕ ಸರ್ಕಾರದ ಸಚಿವರಾದ ಪ್ರಿಯಾಂಕ್ ಖರ್ಗೆ, ಸ್ಪೀಕರ್ ಯು ಟಿ ಖಾದರ್ ಮೊದಲಾದವರು ಅಂತಿಮ ದರ್ಶನವನ್ನು ಈಗಾಗಲೇ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಟ, ನಟಿಯರು, ಹಿರಿಯ ಕಲಾವಿದರು, ಹಲವು ಕ್ಷೇತ್ರಗಳ ಗಣ್ಯರು ಸಹ ಸ್ಪಂದನಾ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ವಿಜಯ್ ರಾಘವೇಂದ್ರ ಅವರಿಗೆ ಪತ್ನಿಯ ಮೇಲೆ ಅಪಾರ ಪ್ರೀತಿ, ಗೌರವವಿದ್ದು ಪತಿ-ಪತ್ನಿ ಅನ್ಯೋಯವಾಗಿ 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದರು. ಹಠಾತ್ ಪತ್ನಿಯ ನಿಧನ ಅವರಿಗೆ ಬರಸಿಡಿಲಿನಂತೆ ಎದುರಾಗಿದ್ದು ಅವರ ದುಃಖ ಹೇಳತೀರದಾಗಿದೆ. ಅಂತಿಮ ದರ್ಶನಕ್ಕೆ ಬಂದವರು ವಿಜಯ ರಾಘವೇಂದ್ರ ಅವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ.
ಸ್ನೇಹಿತೆಯರ ಜೊತೆ ಬ್ಯಾಂಕಾಕ್ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ಬ್ಯಾಂಕಾಕ್ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ಕಳೆದ ತಡರಾತ್ರಿ ಕರೆತರಲಾಯಿತು.
ಪೂಜೆ ವಿಧಿ-ವಿಧಾನ: ಈಡಿಗ ಸಂಪ್ರದಾಯ ಪ್ರಕಾರ ಸ್ಪಂದನ ಅಂತಿಮ ವಿಧಿ ವಿಧಾನಗಳನ್ನು ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಕುಟುಂಬಸ್ಥರು ನೆರವೇರಿಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಅವರೇ ಕೈಗೆ ಬಳೆ ತೊಡಿಸಿ ಹಣೆಗೆ ತಿಲಕವಿಟ್ಟು ಅಲಂಕಾರ ಮಾಡಿ ಮಲಗಿಸಿದ್ದರು.
ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ಅವಕಾಶ: ಸ್ಪಂದನಾ ವಿಜಯರಾಘವೇಂದ್ರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಶ್ರೀರಾಮಪುರದ ಹರಿಶ್ಚಂದ್ರಘಾಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಹರಿಶ್ಚಂದ್ರ ಘಾಟ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ದತೆ ಮಾಡುತ್ತಿದ್ದಾರೆ.
ಹೇಗೆ ರಿಯಾಕ್ಟ್ ಮಾಡಬೇಕು ನನಗೆ ತಿಳಿಯುತ್ತಿಲ್ಲ. ಸ್ಪಂದನಾ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ. ನಟ ವಿಜಯರಾಘವೇಂದ್ರರನ್ನು ನೋಡುವುದಕ್ಕೆ ಕಷ್ಟ ಆಗುತ್ತೆ ಎಂದು ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದರು.
ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ವಿಕ್ರಮ್ ಸೂರಿ, ಪತ್ನಿ,ರಾಜ್ಕುಮಾರ್ ಕುಟುಂಬಸ್ಥರು, ನಟಿ ಸುಧಾರಾಣಿ ಕುಟುಂಬ, ಗಾಯಕ ವಿಜಯ ಪ್ರಕಾಶ್, ರಾಘವೇಂದ್ರ ರಾಜ್ಕುಮಾರ್, ನಟ ಕೋಮಲ್, ಹಿರಿಯ ನಟ ಶ್ರೀನಾಥ್, ಹಿರಿಯ ನಟಿ ಗಿರಿಜಾ ಲೋಕೇಶ್ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದರು.ಸಚಿವ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಶಾಸಕ ಸುನೀಲ್ ಕುಮಾರ್, ಹರತಾಳು ಹಾಲಪ್ಪ, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.