Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಮೆಕ್ಸಿಕೊದಲ್ಲಿ ಬಸ್ ಕಂದಕಕ್ಕೆ ಉರುಳಿದ ಭಾರತೀಯರೂ ಸೇರಿ 18 ಮಂದಿ ಮೃತ್ಯು

ಮೆಕ್ಸಿಕೊ:ಆ,4. ಮೆಕ್ಸಿಕೊದ ನಯಾರಿತ್ ರಾಜ್ಯದಲ್ಲಿ ವಿದೇಶಿಗರನ್ನು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ಬಸ್ 164 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಭಾರತೀಯ ವಲಸಿಗರು ಸೇರಿ ಕನಿಷ್ಠ 18 ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಉತ್ತರ ಗಡಿ ಪಟ್ಟಣವಾದ ಟಿಜುವಾನಾಗೆ ಹೋಗುವ ಮಾರ್ಗದಲ್ಲಿ ಅವಘಡ ಸಂಭವಿಸಿದ್ದು, ಬಸ್‌ನಲ್ಲಿ ಭಾರತ, ಡೊಮಿನಿಕನ್ ರಿಪಬ್ಲಿಕ್ ಮತ್ತು ಆಫ್ರಿಕನ್ ರಾಷ್ಟ್ರಗಳ ನಾಗರಿಕರು ಸೇರಿದಂತೆ ಸುಮಾರು 42 ಪ್ರಯಾಣಿಕರಿದ್ದು, ಅತೀ ವೇಗದ ಚಾಲನೆಯಿಂದ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ

ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದು, ಘಟನೆಯಲ್ಲಿ 22 ಮಂದಿಗೆ ಗಾಯಗಳಾಗಿವೆ ಎಂದು ನಯರಿತ್ ರಾಜ್ಯದ ನಾಗರಿಕ ರಕ್ಷಣಾ ಸಂಸ್ಥೆ ವರದಿ ಮಾಡಿದೆ. ಘಟನೆಗೆ ಸಂಬಂಧಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತರ ವಿವರ ಕಲೆ ಹಾಕಲಾಗುತ್ತಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ನಯಾರಿಟ್‌ನ ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರೋಡ್ರಿಗಸ್ ಹೇಳಿದ್ದಾರೆ.

No Comments

Leave A Comment