ಎರಡು ಪ್ರತ್ಯೇಕ ಎಸ್ಐಟಿ ರಚನೆಗೆ ಶಿಫಾರಸು ಮಾಡಿರುವ ಆಯೋಗ, ಕೊಲೆಗಳು, ಕಾಣೆಯಾದ ವ್ಯಕ್ತಿಗಳು ಇತ್ಯಾದಿಗಳ ಎಲ್ಲಾ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಲುಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಎಸ್ ಐಟಿ ಇರಬೇಕು ಮತ್ತು ನಿರ್ದಿಷ್ಟವಾಗಿ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಪರಿಶೀಲಿಸಲು ಮತ್ತೊಂದು ಎಸ್ ಐಟಿ ರಚನೆಯಾಗಬೇಕು, ಲೈಂಗಿಕ ದೌರ್ಜನ್ಯದ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಮತ್ತು ರಾಜ್ಯದ ಹೊರಗಿನ ತ್ವರಿತ ನ್ಯಾಯಾಲಯದಲ್ಲ್ಲಿ ಮೇಲಾಗಿ ದೆಹಲಿಯಲ್ಲಿ ವಿಚಾರಣೆಗಳನ್ನು ನಡೆಸಬೇಕು ಎಂದು ಡಿಸಿಡಬ್ಲ್ಯೂ ಹೇಳಿಕೆಯಲ್ಲಿ ತಿಳಿಸಿದೆ.