ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಭಾಗವತ ಶ್ರವಣದಿಂದ ಅಧಿಕ ಮಾಸ ಸಾರ್ಥಕ- ಪುತ್ತಿಗೆ ಶ್ರೀಪಾದರು
ಬೆ೦ಗಳೂರು:ಪರಮ ಪಾವನವಾದ ಶ್ರೀಮದ್ಭಾಗವತ ಮಹಾಪುರಾಣದ ಶ್ರವಣದಿಂದ ಪಾಪವೆಲ್ಲವೂ ನಾಶವಾಗುತ್ತದೆ.
ಭಾಗವತ ಶ್ರವಣದಿಂದಲೇ ಜೀವನ ಸಾರ್ಥಕ. ಇದಕ್ಕೆ ಪರೀಕ್ಷಿತ ಮಹಾರಾಜನೇ ಮೊದಲಾದವರು ನಿದರ್ಶನರಾಗಿದ್ದಾರೆ.
ಭಗವಂತನ ಅನೇಕ ಅವತಾರಗಳ ವರ್ಣನೆಯನ್ನು ಭಾಗವತದಲ್ಲಿ ವರ್ಣಿಸಲಾಗಿದೆ. ಇದರ ಶ್ರವಣದಿಂದ ಶುದ್ಧವಾದ ಭಕ್ತಿ ಜಾಗೃತವಾಗುತ್ತದೆ. ಅಧಿಕ ಶ್ರಾವಣ ಮಾಸದ ಏಕಾದಶೀ ಪರ್ವಸಮಯದಲ್ಲಿ ಶ್ರವಣ ಮಾಡುವುದರಿಂದ ವಿಶೇಷ ಫಲವೂ ಇದೆ.
ಆದ್ದರಿಂದ ಭಾಗವತ ಶ್ರವಣದಿಂದ ಅಧಿಕ ಮಾಸದ ಸಾರ್ಥಕವಾಗುತ್ತದೆ ಎಂದು ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ತಿಳಿಸಿದರು.
ಬೆಂಗಳೂರಿನಲ್ಲಿರುವ ಶ್ರೀಪುತ್ತಿಗೆ ಮಠದಲ್ಲಿ ಅಧಿಕ ಮಾಸದ ಏಕಾದಶೀ ಪರ್ವಸಮಯದ ನಿಮಿತ್ತ ಇವತ್ತು ಆಯೋಜಿಸಿರುವ *ಅಖಂಡ ಭಾಗವತ ಪ್ರವಚನ* ಕಾರ್ಯಕ್ರಮವನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ಪರಮಪೂಜ್ಯ ಶ್ರೀ ಶ್ರೀ ಸುವಿದ್ಯೇಂದ್ರತೀರ್ಥಶ್ರೀಪಾದರು ಶ್ರೀಮದ್ಭಾಗವತ ಮಹಾಪುರಾಣದ ಶ್ರವಣದಿಂದ ಪ್ರೇತಜನ್ಮದಿಂದ ಮುಕ್ತಿ ದೊರೆಯುತ್ತದೆ. ಅನೇಕ ನೀತಿಗಳನ್ನು ಉಪದೇಶ ಮಾಡಿ ನಮ್ಮನ್ನು ಸನ್ಮಾಗದಲ್ಲಿ ನಡೆಸುತ್ತದೆ.
ಅನೇಕ ಮಹಾ ರಾಜರ ಕಥಾ ನಿರೂಪಣೆಯಿಂದ ಭಾಗವತವು ನಮಗೆ ದಾರಿದೀಪವಾಗಿದೆ ಎಂದು ಈ ಕಾರ್ಯಕ್ರಮದಲ್ಲಿ ಪ್ರಥಮ ಸ್ಕಂದದ ಪ್ರವಚನವನ್ನು ನೀಡಿದರು .
ನಾಡಿನ ಪ್ರಸಿದ್ಧ ಅನೇಕ ವಿದ್ವಾಂಸರು 12 ಸ್ಕಂಧಗಳ ಭಾಗವತ ಪ್ರವಚನವನ್ನು ನೀಡಿದರು. ವಿದ್ವಾಂಸರಾದ ವೇಣುಗೋಪಾಲ ಅಗ್ನಿಹೋತ್ರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುವರ್ಣ ಚಾತುರ್ಮಾಸ್ಯದ ಈ ಅಪೂರ್ವ ಪ್ರವಚನ ಕಾರ್ಯಕ್ರಮದ ಸೇವೆಯನ್ನು ಶ್ರೀಮತಿ ಮಂಜುಳಾ ಜಗನ್ನಾಥ ಇವರು ಮಾಡಿದರು.