ಕಾಡ್ಗಿಚ್ಚು ನಂದಿಸಲು ಬಂದಿದ್ದ ವಿಮಾನ ಪತನ – ಇಬ್ಬರು ಪೈಲಟ್‌ಗಳು ಮೃತ್ಯು
ರೋಡ್ಸ್:, ಜು 26, ಗ್ರೀಸ್ ನಲ್ಲಿ ಶಾಖದ ಅಲೆ ಹೆಚ್ಚಾಗಿ ಕಾಡ್ಗಿಚ್ಚು ಎಲ್ಲೆಡೆ ಹಬ್ಬಿದ್ದು, ಅದನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ವಿಮಾನವು ಮರಕ್ಕೆ ಡಿಕ್ಕಿ ಹೊಡದು ಪತನಗೊಂಡು ಇಬ್ಬರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಕಾಡಿನಲ್ಲಿ ಬೆಂಕಿ ಧಗಧಗಿಸುತ್ತಿತ್ತು, ಅದನ್ನು ನಂದಿಸಲು ಗ್ರೀಕ್ ವಾಟರ್ ಬಾಂಬ್ ವಿಮಾನವು ಕೂಡ ಬಂದಿತ್ತು, ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ತಕ್ಷಣವೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪೈಲಟ್‌ಗಳು ಸುಟ್ಟು ಕರಕಲಾಗಿದ್ದಾರೆ.
ಇನ್ನು ಬೆಂಕಿ ಇದ್ದ ಸ್ಥಳದ ಸಮೀಪವೇ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗ್ರೀಕ್ ದ್ವೀಪಗಳಾದ ರೋಡ್ಸ್ ಮತ್ತು ಕಾರ್ಫುಗಳಲ್ಲಿ ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರು ಕಾಡಿನ ಬೆಂಕಿಯಿಂದ ಸ್ಥಳಾಂತರಗೊಂಡಿದ್ದಾರೆ.