ಮಣಿಪಾಲ: ವೇಶ್ಯಾವಾಟಿಕೆ ದಂಧೆ – ಇಬ್ಬರ ಬಂಧನ, ಓರ್ವ ಪರಾರಿ
ಮಣಿಪಾಲ:ಜು 22. ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಮಣಿಪಾಲ ಪೋಲಿಸರು ಇಬ್ಬರನ್ನು ಬಂಧಿಸಿದ್ದು ದಾಳಿಯ ವೇಳೆ ಓರ್ವ ಪರಾರಿಯಾದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೋಲಿಸ್ ನಿರೀಕ್ಷಕರಾದ ದೇವರಾಜ್ ಟಿವಿ ಮತ್ತು ಸಿಬ್ಬಂದಿಗಳು ಇಲ್ಲಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ಈ ಸಂಧರ್ಭದಲ್ಲಿ ಅನೈತಿಕ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದು ಓರ್ವ ಪರಾರಿಯಾಗಿದ್ದಾನೆ.
ಈ ಕಾರ್ಯಾಚರಣೆಯಲ್ಲಿ 5 ಮಹಿಳೆಯರನ್ನು ರಕ್ಷಿಸಲಾಗಿದೆ. ಇವರಲ್ಲಿ ಮೂವರು ಬೆಂಗಳೂರಿನವರಾಗಿದ್ದು , ಒಬ್ಬಾಕೆ ಮುಂಬೈ ಮೂಲದವರಾಗಿದ್ದಾರೆ, ಮತ್ತೋರ್ವ ಮಹಿಳೆ ನಾಸಿಕ್ ಮೂಲದವವರಾಗಿದ್ದಾರೆ.
ಬಂಧಿತರಿಂದ 4 ಮೊಬೈಲ್ ಪೋನ್, 10 ಸಾವಿರ ರುಪಾಯಿ ನಗದು, ಕಾಂಡಮ್, ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೈತಿಕ ಚಟುವಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಅನೈತಿಕ ಚಟುವಟಿಕೆ ಗಳಿಗೆ ಕೊಠಡಿಗಳನ್ನು ಒದಗಿಸಿದ ಆರೋಪದ ಮೇರೆಗೆ ಸಲಾಮತ್ ಮತ್ತು ಚಂದ್ರ ಎಂಬವರನ್ನು ವಶಕ್ಕೆ ಪಡೆದಿದ್ದು, ದಾಳಿಯ ಸಮಯದಲ್ಲಿ ಖಾಲಿದ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.