ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಲೋಕಸಭೆ: ಮಣಿಪುರ ಪರಿಸ್ಥಿತಿ ಕುರಿತು ವಿಪಕ್ಷಗಳಿಂದ ತೀವ್ರ ಗದ್ದಲ, ಕೋಲಾಹಲ, ಸೋಮವಾರಕ್ಕೆ ಕಲಾಪ ಮುಂದೂಡಿಕೆ

ನವದೆಹಲಿ: ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ ಹಾಗೂ ಇಬ್ಬರು ಬುಡಕಟ್ಟು ಮಹಿಳೆಯರ ಅರೆಬೆತ್ತಲೆ ಮೆರವಣಿಗೆಯ ವಿಡಿಯೋ ವೈರಲ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಇಂದು ಕೂಡಾ ಗದ್ದಲ, ಕೋಲಾಹಲ ಮುಂದುವರೆಸಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್, ಡಿಎಂಕೆ, ಎಡಪಕ್ಷಗಳು ಪ್ರತಿಪಕ್ಷಗಳ ಸದಸ್ಯರು ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಆರಂಭಿಸಿದವು. ಮಣಿಪುರದಲ್ಲಿ ರಕ್ತದೋಕುಳಿ ನಡೆಯುತ್ತಿದೆ ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಹೇಳುವ ಮೂಲಕ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಘೋಷಣೆ ಕೂಗುವುದರಿಂದ ಸಮಸ್ಯೆಗೆ ಯಾವುದೇ ಪರಿಹಾರ ದೊರೆಯಲ್ಲ, ಆದರೆ ಮಾತುಕತೆ ಮತ್ತು ಚರ್ಚೆ ಮೂಲಕ ಬಗೆಹರಿಸಬಹುದು ಎಂದು ಪ್ರತಿಭಟನಾನಿರತ ಸದಸ್ಯರಿಗೆ ಸ್ಪೀಕರ್ ಹೇಳಿದರು.

ಪದೇ ಪದೇ ಮಾಡಿದ ಮನವಿಗೆ ಪ್ರತಿಭಟನಾಕಾರರು ಯಾವುದೇ ಕಿವಿಗೂಡದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವರನ್ನು ಮಾತನಾಡುವಂತೆ ಸ್ಪೀಕರ್ ಹೇಳಿದರು. ಮಣಿಪುರ ಘಟನೆ ಕುರಿತ ಚರ್ಚೆಗೆ ಸರ್ಕಾರ ಸಿದ್ಧವಿದೆ. ಆದರೆ ವಿಪಕ್ಷಗಳು ವಿನಾಕಾರಣ ತೊಂದರೆ ಸೃಷ್ಟಿಸುತ್ತಿವೆ. ವಿಪಕ್ಷಗಳು ಚರ್ಚೆಗೆ ಗಂಭೀರವಾಗಿಲ್ಲ. ಚರ್ಚೆಯನ್ನು ನಾವು ಬಯಸುತ್ತೇವೆ ಮತ್ತು ಚರ್ಚೆ ನಡೆಯಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ಚರ್ಚೆ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು , ಆದರೆ ನಿಮಗೆ ಯಾವುದೇ ಚರ್ಚೆ ಬೇಕಾಗಿಲ್ಲ ಎಂದು ಸ್ಪೀಕರ್ ವಿಪಕ್ಷಗಳಿಗೆ ತಿಳಿಸಿದರು. ಆದಾಗ್ಯೂ, ವಿಪಕ್ಷಗಳು ತಮ್ಮ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಗಿ ಕಲಾಪವನ್ನು ಸೋಮವಾರಕ್ಕೆ ಸ್ಪೀಕರ್ ಮುಂದೂಡಿದರು.

kiniudupi@rediffmail.com

No Comments

Leave A Comment