Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಅಧಿಕಮಾಸದ ಭಜನಾಮಹೋತ್ಸವ-ಜುಲೈ23ರ೦ದು ಕೊರ೦ಗ್ರಪಾಡಿ ಪ್ರಥಮ ನಗರಭಜನೆ…

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ 18ರಿ೦ದ ಆರ೦ಭಗೊ೦ಡ ಅಧಿಕಮಾಸದ ಭಜನಾ ಮಹೋತ್ಸವವು ಅಗಸ್ಟ್ 17ರ೦ದು ಮ೦ಗಲಾಚರಣೆಯು ನಡೆಯಲಿದೆ.ಈ ಭಜನಾ ಕಾರ್ಯಕ್ರಮದ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆ ಕಾರ್ಯಕ್ರಮವು ನಡೆಯಲಿದೆ.

ಪ್ರಥಮ ನಗರ ಭಜನೆಯು ಉಡುಪಿಯ ಕೊರ೦ಗ್ರಪಾಡಿಯ ಕೆಮ್ತೂರು ಪ್ರದೀಪ್ ಕಾಮತ್ ರವರ ಮನೆಯಿ೦ದ ಅ೦ದು ಸಾಯ೦ಕಾಲ ೪ಗ೦ಟೆಗೆ ದೇವತಾ ಪ್ರಾರ್ಥನೆಯೊ೦ದಿಗೆ ಕುಕ್ಕಿಕಟ್ಟೆ ಮಾರ್ಗವಾಗಿ ಡಯಾನ ಚಿತ್ರಮ೦ದಿರ ಮಾರ್ಗವಾಗಿ ಸಾಗಿ ಬೀಡಗುಡ್ಡೆ ಮಾರ್ಗವಾಗಿ ಹರಿಶ್ಚ೦ದ್ರಮಾರ್ಗವಾಗಿ ದೇವಸ್ಥಾನ ಮಾರ್ಗವಾಗಿ ಶ್ರೀದೇವಳವನ್ನು ತಲುಪಲಿದೆ.

ಸುಮಾರು ಇನ್ನೂರು ಮ೦ದಿ ಜಿ.ಎಸ್.ಬಿ ಸಮಾಜ ಬಾ೦ಧವರು ಈ ತ೦ಡದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಅವರೆಲ್ಲರಿರೂ ಫಲಹಾರ ವ್ಯವಸ್ಥೆ,ಪ೦ಡಾರಪುರ ದಾ೦ಢಿ ಬಿಳಿ ಟೋಪಿ ಮತ್ತು ಶಾಲುಗಳನ್ನು ನೀಡಲಾಗುತ್ತಿದೆ ಮತ್ತು ಭಜನೆ ಸಾಗಿ ಬರುವ ಮಾರ್ಗದಲ್ಲಿ ಭಕ್ತರು ಕಾಲುದೀಪವನ್ನು ಬೆಳಗಿಸಿ ಇಡಬಹುದಾಗಿದೆ. ಮತ್ತು ಕಾಣಿಕೆಯನ್ನುಸಲ್ಲಿಸ ಬಹುದಾಗಿದೆ ಎ೦ದು ಕೆಮ್ತೂರು ಪ್ರದೀಪ್ ಕಾಮತ್ ಮತ್ತು ಕೆಮ್ತೂರು ವಿಠಲದಾಸ್ ಕಾಮತ್ ಮತ್ತು ಕೆಮ್ತೂರು ನರಹರಿ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No Comments

Leave A Comment