Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬೆಂಗಳೂರು: ಬಂಧಿತ ಶಂಕಿತ ಉಗ್ರರಿಂದ 4 ಗ್ರೆನೇಡ್ ಗಳು ವಶಕ್ಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಿಂಗ 4 ಗ್ರೆನೇಡ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಬಂಧಿತ ಶಂಕಿತ ಭಯೋತ್ಪಾದಕನೊಬ್ಬನಿಂದ ನಾಲ್ಕು ಗ್ರೆನೇಡ್ ಗಳನ್ನು ಕೇಂದ್ರ ಅಪರಾಧ ವಿಭಾಗದ ಶೋಧಕರು ಪತ್ತೆ ಮಾಡಿದ್ದಾರೆ. ಜಾಹಿದ್ ತಬ್ರೇಜ್ (25) ಎಂಬ ಬಂಧಿತ ಶಂಕಿತ ಉಗ್ರ ತನ್ನ ಕೊಡಿಗೇಹಳ್ಳಿಯ ನಿವಾಸದಲ್ಲಿ ಈ ಗ್ರೆನೇಡ್‌ಗಳನ್ನು ಇಟ್ಟುಕೊಂಡಿದ್ದ. ತಲೆಮರೆಸಿಕೊಂಡಿರುವ ಮತ್ತು ವಿದೇಶದಲ್ಲಿ ನೆಲೆಸಿರುವ ಜುನೆದ್‌ನಿಂದ ಯಾರೋ ಒಬ್ಬರ ಮೂಲಕ ಅವುಗಳನ್ನು ಪಡೆದುಕೊಂಡಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಶರಣಪ್ಪ ಎಸ್‌ಡಿ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಯು ತನ್ನ ಮನೆಯಲ್ಲಿ ಮರಳಿನ ಚೀಲದಲ್ಲಿ ಈ ಗ್ರೆನೇಡ್‌ಗಳನ್ನು ಅಡಗಿಸಿಟ್ಟಿದ್ದ. ಈ ಗ್ರೆನೇಡ್‌ಗಳು ಜೀವಂತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇನ್ನು ಮಂಗಳವಾರ ಬಂಧಿಸಲಾದ ಐವರು ಭಯೋತ್ಪಾದಕ ಶಂಕಿತರಲ್ಲಿ ಜಾಹಿದ್ ಕೂಡ ಸೇರಿದ್ದಾನೆ. ಈತ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಲಷ್ಕರ್-ಎ-ತೊಯ್ಬಾ ಕಾರ್ಯಕರ್ತ ಟಿ ನಾಸಿರ್ ಜತೆ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.

ಬಂಧಿತ ಶಂಕಿತರಿಂದ ಏಳು ಪಿಸ್ತೂಲ್‌ಗಳು, 45 ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಬಂಧಿತ ಶಂಕಿತ ಉಗ್ರರೆಲ್ಲೂ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸರಣಿ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು ಎಂದು  ಪೊಲೀಸರು ತಿಳಿಸಿದ್ದಾರೆ.

ಈ ಶಂಕಿತರನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

No Comments

Leave A Comment