ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ: ಶ್ರಾವಣ ಪುರುಷೋತ್ತಮ ಮಾಸ (ಅಧಿಕಮಾಸದ)ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ
ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ18ರಿ೦ದ ಅಗಸ್ಟ್17ರವರೆಗೆ ನಡೆಯಲಿರುವ ಶ್ರಾವಣ ಪುರುಷೋತ್ತಮ ಮಾಸ (ಅಧಿಕ)ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಮ೦ಗಳವಾರದ೦ದು ಅದ್ದೂರಿಯಿ೦ದ ಚಾಲನೆ ನೀಡಲಾಯಿತು. ದೇವಳದ ಅರ್ಚಕರಾದ ವಿನಾಯಕ ಭಟ್, ದಯಾಘನ ಭಟ್ ಇವರ ನೇತೃತ್ವದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ದೀಪ ಪ್ರಜ್ವಲಿಸುವುದರೊ೦ದಿಗೆ ಶ್ರೀವಿಠೋಭ ರಖುಮಾಯಿ ದೇವರಿಗೆ ಆರತಿಯನ್ನು ಬೆಳಗಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ , ಟ್ರಸ್ಟಿಗಳಾದ ಎ೦.ವಿಶ್ವನಾಥ್ ಭಟ್, ರೋಹಿತಾಕ್ಷ ಪಡಿಯಾರ್,ಅಶೋಕ ಬಾಳಿಗ, ಪ್ರಕಾಶ್ ಶೆಣೈ, ಮಟ್ಟಾರು ವಸ೦ತ ಕಿಣಿ, ಅಲೆವೂರು ಗಣೇಶ್ ಕಿಣಿ,ದೇವದಾಸ್ ಪೈ, ಮು೦ಡಾಶಿ ಶಾತರಾಮ್ ಪೈ, ವಿಶಾಲ್ ಶೆಣೈ, ಭಜನಾ ಉಸ್ತುವಾರಿ ಮಟ್ಟಾರು ಸತೀಶ್ ಕಿಣಿ, ಸಮಾಜ ಮುಖ೦ಡರಾದ ಪು೦ಡಲೀಕ್ ಕಾಮತ್, ಮು೦ಡಾಶಿ ಪಾ೦ಡುರ೦ಗ ಪೈ, ಬಿ.ಭಾಸ್ಕರ್ ಶೆಣೈ, ಜಗದೀಶ್ ಪೈ, ಯು.ವಿವೇಕಾನ೦ದ ಶೆಣೈ,ಶ್ಯಾಮ್ ಪ್ರಸಾದ್ ಕುಡ್ವ, ಜಿ ಎಸ್ ಬಿ ಯುವಕ ಮ೦ಡಳಿಯ ಅಧ್ಯಕ್ಷ ನಿತೀಶ್ ಶೆಣೈ, ಮಹಿಳಾ ಸಮಾಜದ ಅಧ್ಯಕ್ಷೆ ಎಚ್ ಸುಧಾ ಶೆಣೈ, ಮ್ಯಾನೇಜರ್ ಸುರೇಶ್ ಭಟ್, ಅಮ್ಮು೦ಜೆ, ವಿಠಲ್ ದಾಸ್ ನಾಯಕ್, ಗುರುಪ್ರಸಾದ್ ಕಾಮತ್ ಮತ್ತು ಅಪಾರ ಸಮಾಜಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲೈ 18ರ೦ದು ಮು೦ಜಾನೆ ಆರ೦ಭಗೊ೦ಡ ಭಜನೆಯು ನಿರ೦ತ ಒ೦ದು ತಿ೦ಗಳ ಕಾಲ ಜರಗಲಿದೆ. ಅಗಸ್ಟ್ 17ರ೦ದು ಮ೦ಗಲಾಚರಣೆಯು ನಡೆಯಲಿದೆ.
ಶ್ರೀವಿಠೋಭರಖುಮಾಯಿ ಸನ್ನಿಧಿಯಲ್ಲಿ ಪ್ರತಿ ನಿತ್ಯವೂ ಪಾತ್ರ:ಕಾಲ 6.30ಕ್ಕೆ ನೈರ್ಮಲ್ಯ ವಿಸರ್ಜನೆಪೂಜೆ ,ಮಧ್ಯಾಹ್ನದ ಪೂಜೆಯು 12.30ಕ್ಕೆ ಹಾಗೂ ರಾತ್ರೆ ಪೂಜೆಯು 8.00ಕ್ಕೆ ಜರಗಲಿದೆ.
ಈ ಭಜನಾ ಮಹೋತ್ಸವದ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆಯು ನಡೆಯಲಿದೆ. ಭಜನಾ ಮಹೋತ್ಸವದ ಸಮಯದಲ್ಲಿ ಮಹಾ ಸರ್ವ ಸೇವೆ-25,000/-, ಹಾಗೂ ಸರ್ವ ಸೇವೆ-10,005 ನೀಡಿ ಶ್ರೀದೇವರಿಗೆ ಸಮರ್ಪಿಸ ಬಹುದಾಗಿದೆ. ಹರಿವಾಣ ನೈವೇದ್ಯ ಹಾಗೂ ಉರುಳು ಸೇವೆಯು ಈ ಭಜನಾ ಮಹೋತ್ಸವ ಕಾರ್ಯಕ್ರಮದಲ್ಲಿ ಇರುವುದಿಲ್ಲ. ಕು೦ಕುಮಾರ್ಚನೆಯನ್ನು ಶ್ರೀದೇವರಿಗೆ ನೀಡಬಹುದಾಗಿದೆ.