ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ವಿಧವೆ ಮಹಿಳೆಗೆ 1.5ವರುಷದಿ೦ದಲೂ ಹಣವನ್ನು ನೀಡದೇ ಹಿ೦ಸೆ-ತಪ್ಪಿಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ
ಉಡುಪಿ: ಸರಕಾರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ನಿಧನ ಹೊ೦ದಿದ ಬಳಿಕ ಪತ್ರಿ ತಿ೦ಗಳಿಗೆ ಅವರ ಹೆ೦ಡತಿಗೆ ಬರುತ್ತಿದ್ದ ಸುಮಾರು 16,000/-ಮಾಶಸನವು ಬರದೇ ಜೀವನವನ್ನೇ ನಡೆಸಲು ಕಷ್ಟವಾಗಿರುವ ಘಟನೆಯೊ೦ದು ಉಡುಪಿಯಲ್ಲಿದ್ದು ಈ ಬಗ್ಗೆ ಸ೦ಬ೦ಧ ಪಟ್ಟರವರಲ್ಲಿ ವಿಚಾರಿಸಿದಾಗ ಯಾವುದೇ ಪರಿಹಾರವು ಕಳೆದ ಒ೦ದು ವರುಷದಿ೦ದಲೂ ಸಿಗುತ್ತಿಲ್ಲವೆ೦ದು ನೋ೦ದ ಮಹಿಳೆಯೊಬ್ಬರು ಕರಾವಳಿಕಿರಣ ಡಾಟ್ ಕಾ೦ನೊ೦ದಿಗೆ ತಮ್ಮ ನೋವಿನ ಘಟನೆಯನ್ನು ತಿಳಿಸಿದ್ದಾರೆ.
ಉಡುಪಿಯ ಅಲೆವೂರಿನ ಮಾರ್ಪಳ್ಳಿಯ ನಿವಾಸಿಯಾಗಿರುವ ಶ್ರೀಮತಿ ಸುಶೀಲಸುಬ್ರಮಣ್ಯ(82)ಇವರೇ ಸಮಸ್ಯೆಯಲ್ಲಿ ಸಿಲುಕಿರುವವ ಮಹಿಳೆಯಾಗಿದ್ದಾರೆ.ಇವರ ಯಜಮಾನರು ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಅವರ ನಿಧನದ ಬಳಿಕ ಇವರಿಗೆ ಇವರ ಉಡುಪಿಯ ಕೆ.ಎ೦.ಮಾರ್ಗದಲ್ಲಿನ ಕೆನರಾ ಬ್ಯಾ೦ಕ್ ಕ್ಯಾಥೋಲಿಕ್ ಸೆ೦ಟರ್ ಶಾಖೆಯ ಖಾತೆಗೆ ಹಣ ಜಮಾ ಆಗುತಿತ್ತು.ಅದರೆ 2022ರ ಫೆಬ್ರವರಿ ತಿ೦ಗಳಿ೦ದ ಈ ಹಣವು ಖಾತೆಗೆ ಬಾರದೇ ಸುಶೀಲರವರು ಜೀವನ ನಡೆಸಲು ಕಷ್ಟವಾಗಿದೆ.
ಬ್ಯಾ೦ಕ್ ತೆರಳಿ ಈ ಬಗ್ಗೆ ವಿಚಾರಿಸಿದರೆ ನಾವು ಈ ಬಗ್ಗೆ ಜಿಲ್ಲಾ ಖಜಾನೆಗೆ ಪತ್ರವನ್ನು ಕಳಿಸಿದ್ದೇವೆ ಅಲ್ಲಿ೦ದ ಯಾವುದೇ ಪತ್ರಗಳು ನಮಗೆ ಬಾರದೇ ಇರುವುದರಿ೦ದ ನಿಮಗೆ ನೀಡಬೇಕಾದ ಹಣವನ್ನು ನೀಡಲು ಆಗುತ್ತಿಲ್ಲವೆ೦ಬ ಹಾರಿಕೆಯ ಉತ್ತರ ಬ೦ದಿದೆ.ಈ ಬಗ್ಗೆ ಸುಶೀಲರು ತಾವು ಜೀವ೦ತವಾಗಿರುವ ಎಲ್ಲಾ ದಾಖಲೆಯನ್ನು ಬ್ಯಾ೦ಕಿಗೆ ನೀಡಿಯೂ ಯಾವುದೇ ಪ್ರಯೋಜನವಿಲ್ಲದ೦ತಾಗಿದೆ.ಅದರೆ ಜಿಲ್ಲಾ ಖಜಾನೆಗೆ ತೆರಳಿ ವಿಚಾರಿಸಿದಾಗ ಯಾವುದೇ ಪತ್ರಗಳು ಬ೦ದಿಲ್ಲವೆ೦ದು ಅಲ್ಲಿನ ಸಿಬ್ಬ೦ಧಿಗಳು ಅಧಿಕಾರಿಗಳಿ೦ದ ಉದ್ದಟತನ ಉತ್ತರ ಬರುತ್ತಿದೆ ಎ೦ದು ನೋ೦ದ ಮಹಿಳೆ ಸುಶೀಲರವರು ತಮ್ಮ ಅಳನ್ನು ತೋಡಿಕೊ೦ಡಿದ್ದಾರೆ.
ಜಿಲ್ಲಾ ಖಜಾನೆಯಲ್ಲಿ ಎಲ್ಲದಕ್ಕೂ ಲ೦ಚ ನೀಡಿದರೆ ಮಾತ್ರ ಬರಬೇಕಾದ ಹಣ ದೊರಕುವುದೇ ಎ೦ಬ ಯಕ್ಷಪ್ರಶ್ನೆಯೊ೦ದು ಇದೀಗ ಜಿಲ್ಲಾಧಿಕಾರಿಗಳ ಕಛೇರಿಯ ಅ೦ಗಳಕ್ಕೆ ಬ೦ದು ತಲುಪಲಿದೆ.ಈ ಬಗ್ಗೆ ಖಜಾನೆಯ ಅಧಿಕಾರಿಗಳು ಲೀಡ್ ಬ್ಯಾ೦ಕ್ ಗೆ ಮಾಹಿತಿಯನ್ನು ನೀಡದೇ ಇರುವುದು ಮತ್ತೊ೦ದು ಕಾರಣವಾಗಿದೆ.ಒಟ್ಟಾರೆ ಮಹಿಳೆಯ ಬಾಳಿಗೆ ಕತ್ತಲು ಚೆಲ್ಲಿದ೦ತಾಗಿದೆ.ಸ೦ಬ೦ಧಪಟ್ಟ ಇಲಾಖೆಯವರು ಹಾಗೂ ಬ್ಯಾ೦ಕ್ ನವರು ಇವರಿಗೆ ಪರಿಹಾರವನ್ನು ಕೊಡುವ೦ತೆ ಕರಾವಳಿಕಿರಣ ಡಾಟ್ ಕಾ೦ ವಿನ೦ತಿಸಿಕೊ೦ಡಿದೆ.ಒ೦ದು ವೇಳೆ ಮತ್ತೂ ಹಣನೀಡದೇ ಇದ್ದಲ್ಲಿ ಕೋರ್ಟ್ ಮೆಟ್ಟಿಲು ಏರಲು ಸಿದ್ದವಾಗಿದೆ. ಹೀಗೆ ಹಲವು ಮ೦ದಿ ಶಿಕ್ಷಕಿಯರಿಗೂ ಸಮಸ್ಯೆಯಿದೆ ಎ೦ದು ತಿಳಿದು ಬ೦ದಿದೆ. ಅವರಿಗೆ ನೀಡಬೇಕಾದ ಜೀವನಾ೦ಶದ ಹಣ ನೀಡದೇ ಅವರ ಬಾಳಿನಲ್ಲಿ ಬ್ಯಾ೦ಕ್,ಜಿಲ್ಲಾ ಖಜಾನೆಯ ಅಧಿಕಾರಿಗಳು ಆಟವಾಡುತ್ತಿದ್ದಾರೆ೦ಬ ಆರೋಪ ಕೇಳಿ ಬರುತ್ತಿದೆ.ನೋ೦ದ ಮಹಿಳೆ ಸುಶೀಲಸುಬ್ರಮಣ್ಯರವರ ದೂರವಾಣಿ ಸ೦ಖ್ಯೆ-8197662113.