ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ, ಆಮೆ ವಿಗ್ರಹ ನೀಡಿದ ಇನ್ಫೋಸಿಸ್ ನಾರಾಯಣಮೂರ್ತಿ ದಂಪತಿ

ತಿರುಪತಿ: ಇನ್ಫೋಸಿಸ್ ಸಂಸ್ಥೆ ಸಹ ಸಂಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ತಿರುಪತಿ‌ ವೆಂಕಟೇಶ್ವರಸ್ವಾಮಿಗೆ  ಬಂಗಾರದ ಶಂಖ ಹಾಗೂ ಆಮೆ ವಿಗ್ರಹ ಕಾಣಿಕೆಯಾಗಿ ನೀಡಿದ್ದಾರೆ.

ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾರಾಯಣಮೂರ್ತಿ ದಂಪತಿ ಮೊದಲಿನಿಂದಲೂ ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ.

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ದಾಂಪತ್ಯ ಜೀವನಕ್ಕೆ ಈಗ 45 ವರ್ಷ. ಹೀಗಾಗಿ ಅವರ ಬಳಿಯಿದ್ದ ಕೆಲವು ಆಭರಣಗಳಿಂದ ಈ ಬಂಗಾರದ ಶಂಖ ಹಾಗೂ ಆಮೆಯನ್ನು ಮಾಡಿಸಿ ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡಿದ್ದಾರೆ.

No Comments

Leave A Comment