ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠಕ್ಕೆ ಲಕ್ಷಕ್ಕೂ ಮಿಕ್ಕ ಬೆಲೆ ಬಾಳುವಬೆಲೆಯ ಕಾಣಿಕೆಡಬ್ಬಿ ಸಮರ್ಪಣೆ
ಉಡುಪಿ:ಉಡುಪಿಯ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠಕ್ಕೆ ಗುರುವಾರದ೦ದು ಮೂಡಬಿದ್ರೆಯ ನಿತ್ಯಾನ೦ದ ವುಡ್ ವರ್ಕ್ಸ್ ನ ಮಾಲಿಕರಾದ ಹರೀಶ್ ಆಚಾರ್ಯ ಕುಟು೦ಬ ಸಮೇತರಾಗಿ ಲಕ್ಷಕ್ಕೂ ಮಿಕ್ಕ ಬೆಲೆಬಾಳುವ ಎರಡು ತಾಮ್ರದ ಹೊದಿಕೆಯುಳ್ಳ ಕಾಣಿಕೆ ಡಬ್ಬಿಗಳನ್ನು ಗುರುವಾರದ೦ದು ಮ೦ದಿರಕ್ಕೆ ಸಮರ್ಪಿಸಲಾಯಿತು.ಟ್ರಸ್ಟಿ ತೋಟದ ಮನೆ ದಿವಾಕರ ಶೆಟ್ಟಿ ಮ೦ದಿರ ಆಡಳಿತ ಮ೦ಡಳಿಯ ಅಧ್ಯಕ್ಷರಾದ ಬನ್ನ೦ಜೆ ಉದಯಕುಮಾರ್ ಶೆಟ್ಟಿ,ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ,ಉಪಾಧ್ಯಕ್ಷರಾದ ಯೋಗೀಶ್ ಶ್ಯಾನ್ ಭಾಗ್, ಅರ್ಚಕರಾದ ಗಣೇಶ್ ಕುಲಕರ್ಣಿ,ನರೇಶ್ ಪೂಜಾರಿ,ಸುರೇ೦ದ್ರ ಶೆಟ್ಟಿ, ತಾರನಾಥಮೇಸ್ತ ಮೊದಲಾದವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.