ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಉಡುಪಿ: ಸಂತೆಕಟ್ಟೆ ಅಂಡರ್ ಪಾಸ್ ನಿರ್ಮಾಣ ಪ್ರದೇಶದಲ್ಲಿ ಸರ್ವೀಸ್ ರಸ್ತೆ ಕುಸಿತ
ಉಡುಪಿ:ಜು 10. ಇಲ್ಲಿನ ಸಂತೆಕಟ್ಟೆ ಬಳಿ ನಿರ್ಮಾಣವಾಗುತ್ತಿದ್ದ ಅಂಡರ್ ಪಾಸ್ ನಿರ್ಮಾಣ ಪ್ರದೇಶದಲ್ಲಿ ಸರ್ವೀಸ್ ರಸ್ತೆ ಕುಸಿದು ಸುಮಾರು 350ಕ್ಕೂ ಹೆಚ್ಚು ಮನೆ , ಹಾಗೂ ಅಂಗಡಿ ಮುಂಗಟ್ಟುಗಳಿಗೆ ರಸ್ತೆಯೇ ಇಲ್ಲದಂತಾಗಿದೆ.
ಅಂಡರ್‌ಪಾಸ್ ನಿರ್ಮಾಣದ ಸನಿಹವಿದ್ದ ತಡೆಗೋಡೆ ಜುಲೈ 10 ರ ಸೋಮವಾರ ಬೆಳಿಗ್ಗೆ ಭಾಗಶಃ ಕುಸಿದಿದೆ. ಇದರಿಂದಾಗಿ ಸರ್ವಿಸ್ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕುಸಿಯುವ ಆತಂಕವನ್ನು ಇಲ್ಲಿನ ನಿವಾಸಿಗಳು ಮತ್ತು ಚಿಲ್ಲರೆ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಎಂಜಿನಿಯರ್ ನ್ನು ಸಂಪರ್ಕಿಸಲು ಯತ್ನಿಸಿದಾಗ ಕರೆಗೆ ಲಭ್ಯವಾಗಲಿಲ್ಲ.
ಈ ಪ್ರದೇಶದಲ್ಲಿ ಸುಮಾರು 350 ಮನೆಗಳಿದ್ದು, ಈ ಕುಟುಂಬಗ ಳು ಇದೇ ರಸ್ತೆಅವಲಂಭಿಸಿದ್ದು, ತಕ್ಷಣವೇ ಸಂಚಾರಕ್ಕೆ ಹೊಸ ರಸ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ. ಅಂಡರ್‌ಪಾಸ್ ಕಾಮಗಾರಿ ನಿಲ್ಲಿಸದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.