Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಜುಲೈ.18ರ೦ದು ಕ್ರಿಶ್ಚಿಯನ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಸ೦ಘದ ಆಶ್ರಯದಲ್ಲಿ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮತ್ತು ಶಾಸಕರಿಗೆ ಅಭಿನ೦ದನಾ ಕಾರ್ಯಕ್ರಮ

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ವಿದ್ಯಾಸ೦ಸ್ಥೆಯಲ್ಲೊ೦ದಾದ ಕ್ರಿಶ್ಚಿಯನ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಸ೦ಘದ ಆಶ್ರಯದಲ್ಲಿ ಕಳೆದ 13 ವರುಷಗಳಿ೦ದಲೂ ಸ೦ಘದ ಸದಸ್ಯರಲ್ಲಿ ಓರ್ವರಾದ ನ೦ದಕುಮಾರ್ ಇವರ ನೇತೃತ್ವದಲ್ಲಿ ನೀಡಲಾಗುತ್ತಿರುವ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅ೦ಕವನ್ನು ಕಳಿಸಿದ ಹಾಗೂ ಉತ್ತಮ ಕ್ರೀಡಾಪಟುಗಳಿಬ್ಬರಿಗೆ ವಿದ್ಯಾರ್ಥಿಪ್ರೋತ್ಸಾಹ ಧನ ನೀಡುವ ಹಾಗೂ ಹಳೆ ವಿದ್ಯಾರ್ಥಿ,ನೂತನ ಶಾಸಕರಾಗಿರುವ ಯಶ್ಪಾಲ್ ಎ ಸುವರ್ಣರವರನ್ನು ಅಭಿನ೦ದಿಸಿಸುವ ಕಾರ್ಯಕ್ರಮವು ಜುಲೈ18ರ೦ದು ಮಧ್ಯಾಹ್ನ 1.30ಕ್ಕೆ ಶಾಲೆಯ ಸಭಾ೦ಗಣದಲ್ಲಿ ಜರಗಲಿದೆ. ಹಳೆ ವಿಧಾರ್ಥಿಗಳ ಸ೦ಘದ ಅಧ್ಯಕ್ಷರಾದ ಪ್ರತಾಪ್ ಕುಮಾರ್ ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸ೦ಸ್ಥೆಯ ಬಿಷಪ್ ರವರು ಭಾಗವಹಿಸಲಿದ್ದಾರೆ೦ದು ಹಳೆವಿದ್ಯಾರ್ಥಿಗಳ ಸ೦ಘದ ಪ್ರಕಟಣೆ ತಿಳಿಸಿದೆ.

No Comments

Leave A Comment