ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಹರಿಯಾಣದಲ್ಲಿ ಭೀಕರ ಅಪಘಾತ: ಬಸ್-ಕ್ರೂಸರ್ ಡಿಕ್ಕಿ, 8 ಮಂದಿ ದುರ್ಮರಣ

ಚಂಡೀಗಢ: ಬಸ್‌–ಕ್ರೂಸರ್‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 8 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಜಿಂದ್‌ನ ಭಿವಾನಿ ರಸ್ತೆಯಲ್ಲಿರುವ ಬಿಬಿಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಇಂದು ಬೆಳಿಗ್ಗೆ ಜಿಂದ್ ಬಸ್ ನಿಲ್ದಾಣದಿಂದ 9:30ರ ಸುಮಾರಿಗೆ ಹೊರಟ ಬಸ್​ ಬೀಬಿಪುರ ಗ್ರಾಮದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಬರುತ್ತಿದ್ದ ಕ್ರೂಸರ್ ಬಸ್’ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕ್ರೂಸರ್ ನಜ್ಜುಗುಜ್ಜಾಗಿದದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯನಡೆಸಿ ಗಾಯಾಳುಗಳನ್ನು ತಕ್ಷಣ ಜಿಂದ್ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ರವಾನಿಸಿದ್ದಾರೆ.

kiniudupi@rediffmail.com

No Comments

Leave A Comment