Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ದಕ್ಷಿಣ ಆಫ್ರಿಕಾ : ವಿಷಕಾರಿ ಅನಿಲ ಸೋರಿಕೆ – ಮಕ್ಕಳು ಸೇರಿ 16 ಮಂದಿ ಮೃತ್ಯು

ಜೋಹಾನ್ಸ್​ಬರ್ಗ್:ಜು 6. ದಕ್ಷಿಣ ಆಫ್ರಿಕಾದ ಜೋಹಾನ್ಸ್​ಬರ್ಗ್​ನ ಸಮೀಪದ ಬೋಕ್ಸ್‌ಬರ್ಗ್ ಜಿಲ್ಲೆಯ ಬಳಿಯ ಏಂಜೆಲೋ ಟೌನ್‌ಶಿಪ್‌ನಲ್ಲಿ ವಿಷಕಾರಿ ಅನಿಲ ಸೋರಿಕೆ ಉಂಟಾಗಿ ಮಕ್ಕಳು ಸೇರಿ 16 ಮಂದಿ ಮೃತಪಟ್ಟಿದ್ದಾರೆ.

ಅನಿಲ ಸೋರಿಕೆಯಿಂದ ಸಾವನ್ನಪ್ಪಿದವರಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅನಿಲ ಸಿಲಿಂಡರ್ ಅನ್ನು ಗುಡಿಸಲಿನೊಳಗೆ ಅಕ್ರಮವಾಗಿ ಚಿನ್ನ ಸಂಸ್ಕರಣೆ ಮಾಡಲು ಬಳಕೆ ಮಾಡುತ್ತಿದ್ದರು. ಇದು ಯಾವ ವಿಧದ ಅನಿಲ ಎಂಬುದು ಎನ್ನಷ್ಟೇ ತಿಳಿದುಬರಬೇಕಿದೆ

ವೈದ್ಯಾಧಿಕಾರಿಗಳ ನೆರವಿನಿಂದ ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಭಾಗವಾಗಿ ಅನಿಲವನ್ನು ಬಳಸಲಾಗುತ್ತಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸಿದೆ.

No Comments

Leave A Comment