Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕುಯಿಲಾಡಿ ಎಸ್ ನಾಯಕ್ ಮು೦ದುವರಿಕೆ…

ಉಡುಪಿ:ದೇಶದಲ್ಲಿ ಮು೦ದಿನ ವರುಷದ ಮಾರ್ಚ್ ತಿ೦ಗಳಲ್ಲಿ ನಡೆಯಲಿರುವ ಲೋಕಸಭಾ ಕ್ಷೇತ್ರದ ಚುನಾವಣೆಯು ಸೇರಿದ೦ತೆ ತಾಲೂಕು ಪ೦ಚಾಯತ್,ಜಿಲ್ಲಾ ಪ೦ಚಾಯತ್ ಚುನಾವಣೆಯು ನಡೆಯಲಿರುವ ಕಾರಣದಿ೦ದಾಗಿ ಯಾವುದೇ ಕಾರಣಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷಸ್ಥಾನದಿ೦ದ ಬೇರೆಯಾರಿಗೂ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡದೇ ಈಗಿರುವ ಕುಯಿಲಾಡಿ ಸುರೇಶ್ ನಾಯಕ್ ರವರನ್ನೇ ಒ೦ದುವರುಷಗಳ ಕಾಲಾವಧಿಯವರೆಗೆ ಮು೦ದುವರಿಸಲಾಗುತ್ತಿದೆ ಎ೦ದು ಬಿಜೆಪಿಯ ಹಿರಿಯ ನಾಯಕರೊಬ್ಬರು ಕರಾವಳಿಕಿರಣ ಡಾಟ್ ಕಾ೦ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊ೦ಡ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ನೇಮಿಸಲಾಗದೇ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷನನ್ನು ನೇಮಿಸಲಾದ ಪರಿಸ್ಥಿತಿಯಲ್ಲಿರುವಾಗ ಮತ್ತೆ ಹೊಸ ಗೊ೦ದಲ ಬೇಡವೆ೦ಬ ಕಾರಣದಿ೦ದಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನನ್ನು ನೇಮಕ್ಕೆ ಬಿಜೆಪಿ ಬ್ರೇಕ್ ಹಾಕಿದೆ.

No Comments

Leave A Comment