ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಬೇತಿಉದ್ಘಾಟನೆ
ಬ್ರಹ್ಮಾವರ:ಬ್ರಹ್ಮಾವರ ಸರಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್) ಯಲ್ಲಿ ಜೂನ್ 30, 2023ರಂದು ಈ ಬಾರಿಯ ಯಕ್ಷಶಿಕ್ಷಣ ತರಬೇತಿಯನ್ನುಉಡುಪಿ ಶಾಸಕರಾದಯಶ್‍ಪಾಲ್ ಸುವರ್ಣಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಕೆ.ರಘುಪತಿ ಭಟ್ 16 ವರ್ಷದ ಹಿಂದೆತಾವು ಶಾಸಕರಾಗಿದ್ದಾಗ ಆರಂಭಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳ ಯಕ್ಷಶಿಕ್ಷಣದ ಈ ಅಭಿಯಾನವುಅತ್ಯಂತ ಮೌಲಿಕವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಪ್ರಕೃತಟ್ರಸ್ಟ್‍ನಅಧ್ಯಕ್ಷನಾಗಿತಾನುಇದರಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದುಈ ಸಂದರ್ಭದಲ್ಲಿ ನುಡಿದರು.
ಶಾಲಾ ಪ್ರಭಾರಉಪಪ್ರಾಂಶುಪಾಲರಾದಜಗದೀಶರು ಸ್ವಾಗತಿಸಿದರು.ಟ್ರಸ್ಟ್‍ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಬ್ರಹ್ಮಾವರ ಬೋರ್ಡ್ ಶಾಲೆಯ ವಿದ್ಯಾರ್ಥಿಗಳ ಪ್ರದರ್ಶನ ಪ್ರತೀವರ್ಷವೂ ಅತ್ಯುತ್ತಮವಾಗಿರುತ್ತದೆ.ಈ ಬಾರಿಯೂ ಯಶಸ್ವಿಯಾಗಲಿ ಎಂದು ಹಾರೈಸಿದರು.
ಟ್ರಸ್ಟ್‍ನ ವಿಶ್ವಸ್ಥರಾದಎಸ್. ವಿ.ಭಟ್, ಶಾಲೆಯ ನಿವೃತ್ತಉಪಪ್ರಾಂಶುಪಾಲ ಬಿ.ಟಿ. ನಾಯ್ಕ್, ಶಾಲಾಭಿವೃದ್ಧಿಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ ಗಾಣಿಗ ಹಾರಾಡಿ, ಪಿ.ಟಿ. ಎ. ಅಧ್ಯಕ್ಷರಾದ ಸದಾನಂದ ವಾರಂಬಳ್ಳಿ, ಸದಸ್ಯರಾದ ಭಾಸ್ಕರರೈ, ಸುಧೀರ್‍ಕುಮಾರ್ ಶೆಟ್ಟಿ, ಯಕ್ಷ ಗುರುಗಳಾದ ನರಸಿಂಹ ತುಂಗ ಉಪಸ್ಥಿತರಿದ್ದರು. ಶಿಕ್ಷಕ ಶಶಿಧರ ಶೆಟ್ಟಿಕಾರ್ಯಕ್ರಮ ನಿರ್ವಹಿಸಿದರು.ಸಮಾರಂಭದ ಪೂರ್ವದಲ್ಲಿ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರಸ್ತುತಿಗೊಂಡಿತ್ತು.ಶಾಲೆಯ 73 ವಿದ್ಯಾರ್ಥಿನಿಯರು ಹಾಗೂ 30 ವಿದ್ರ್ಯಾಥಿಗಳು ಯಕ್ಷಗಾನತರಬೇತಿಗೆ ಪಾಲ್ಗೊಳ್ಳುತ್ತಿರುವುದು ವೈಶಿಷ್ಟ್ಯವಾಗಿದೆ.