ಪೂರ್ವ ಉಕ್ರೇನ್ ನಗರದ ಪಿಜ್ಜಾ ರೆಸ್ಟೋರೆಂಟ್‌ಗೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ; 3 ಮಕ್ಕಳು ಸೇರಿದಂತೆ 9 ಮಂದಿ ಸಾವು
ಕೀವ್: ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ನಗರದ ಜನನಿಬಿಡ ಪಿಜ್ಜಾ ರೆಸ್ಟೋರೆಂಟ್‌ಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ರಕ್ಷಣಾ ಕಾರ್ಯಕರ್ತರು ನಾಶವಾದ ಕಟ್ಟಡದ ಅವಶೇಷಗಳಲ್ಲಿ ಹುಡುಕಾಟ ಮುಂದುವರೆಸಿದ್ದಾರೆ.
ಮಂಗಳವಾರ ಸಂಜೆ ಕ್ರಮಾಟೋರ್ಸ್ಕ್ ನಗರದ ರಿಯಾ ಪಿಜ್ಜಾ ರೆಸ್ಟೋರೆಂಟ್ ಮೇಲೆ ನಡೆಸಿದ ದಾಳಿಯಲ್ಲಿ 56 ಜನರು ಗಾಯಗೊಂಡಿದ್ದಾರೆ. 16 ತಿಂಗಳ ಹಳೆಯ ಯುದ್ಧದಲ್ಲಿ ರಷ್ಯಾ ಒಂದೇ ಒಂದು ತಂತ್ರವನ್ನು ಹೆಚ್ಚಾಗಿ ಬಳಸಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯ ಇತ್ತೀಚಿನ ಬಾಂಬ್ ದಾಳಿಯನ್ನು ಉಲ್ಲೇಖಿಸಿ ತಿಳಿಸಿದೆ.
ದಾಳಿಯ ಪರಿಣಾಮವಾಗಿ 14 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಸಾವಿಗೀಡಾಗಿದ್ದಾರೆ ಎಂದು ಕ್ರಾಮಾಟೋರ್ಸ್ಕ್ ಸಿಟಿ ಕೌನ್ಸಿಲ್‌ನ ಶೈಕ್ಷಣಿಕ ಇಲಾಖೆ ತಿಳಿಸಿದೆ. ರಷ್ಯಾದ ಕ್ಷಿಪಣಿಗಳು ಇಬ್ಬರು ಯುವತಿಯರ ಹೃದಯ ಬಡಿತವನ್ನು ನಿಲ್ಲಿಸಿದವು ಎಂದು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಅದು ಹೇಳಿದೆ.
ಮತ್ತೊಂದು ಮೃತ ಮಗುವಿನ ವಯಸ್ಸು 17 ವರ್ಷವಾಗಿದೆ ಎಂದು ಪ್ರಾಸಿಕ್ಯೂಟರ್ ಜನರಲ್ ಆಂಡ್ರಿ ಕೊಸ್ಟಿನ್ ತಿಳಿಸಿದ್ದಾರೆ|