Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಮಧ್ಯಪ್ರದೇಶ: ನದಿಗೆ ಉರುಳಿ ಬಿದ್ದ ಟ್ರಕ್, ಐವರ ದುರ್ಮರಣ

ಭೋಪಾಲ್: ಮದುವೆ ಮನೆಯವರನ್ನು ಹೊತ್ತೊಯುತ್ತಿದ್ದ ಟ್ರಕ್’ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

“ಕಳೆದ ತಡರಾತ್ರಿ, ಟ್ರಕ್ ಬುಹಾರಾ ಗ್ರಾಮವನ್ನು ತಲುಪಿದಾಗ, ನದಿಯ ದಡದ ಬಳಿ ಉರುಳಿಬಿದ್ದಿದೆ. ಪರಿಣಾಮ 65 ವರ್ಷದ ಮಹಿಳೆ, 15 ವರ್ಷದ ಬಾಲಕ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ,

ಮಾಹಿತಿಗಳ ಪ್ರಕಾರ, ಅಪಘಾತಕ್ಕೀಡಾದವರು ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದಿಂದ ಜಾತಾರಾಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಿನಿ ಟ್ರಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಬುಹಾರಾ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು-ಆಡಳಿತ ಮಂಡಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಪ್ರಾರಂಭಿಸಿದರು. ಈ ವೇಳೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ನಡುವೆ ಅಪಘಾತದ ಬಗ್ಗೆ ಮಧ್ಯಪ್ರದೇಶ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ರಕ್ಷಣಾ ಕಾರ್ಯ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದೇನೆ.. ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಸೂಚಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ಘಟನೆ ತುಂಬಾ ದುಃಖಕರವಾಗಿದೆ. ಇವರು ಖಾಟಿಕ್ ಸಮುದಾಯದ ಜನರು, ಅವರು ಗ್ವಾಲಿಯರ್ ಜಿಲ್ಲೆಯ ನಿವಾಸಿಗಳು. ಅವರು ಐಸ್ ಟ್ರಕ್‌ನಲ್ಲಿ ಟಿಕಾಮ್‌ಗಢ್ ಜಿಲ್ಲೆಯ ಜಾತಾರಾಗೆ ಹೋಗುತ್ತಿದ್ದರು. ದಾತಿಯಾದ ಹಳ್ಳಿಯೊಂದರಲ್ಲಿ ಟ್ರಕ್‌ ಪಲ್ಟಿಯಾಗಿದೆ. ಕೂಡಲೇ ಆಡಳಿತ ಮಂಡಳಿ ಸ್ಥಳಕ್ಕೆ ತಲುಪಿತ್ತು. ಇದುವರೆಗೆ 5 ಜನರ ಮೃತದೇಹಗಳು ಪತ್ತೆಯಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

No Comments

Leave A Comment