ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉದಯವಾಣಿ ಪತ್ರಿಕೆಯ ಹಿರಿಯ ಏಜೆ೦ಟ್ ಕಿದಿಯೂರು(ಮಲ್ಪೆ) ಗೋಪಾಲಕೃಷ್ಣ ಭ೦ಡಾರ್ಕರ್ ನಿಧನ
ಮಲ್ಪೆ:ಸರ್ವಜನಪ್ರಿಯ ಹಿರಿಯರು,ಯುವಕರು,ಮಕ್ಕಳೆನ್ನದ ಎಲ್ಲವಯೋಮಾನದವರ ಪ್ರೀತಿಗೆ ಪಾತ್ರವಾಗಿರುವ ಉದಯವಾಣಿ ಪತ್ರಿಕೆ ಮುದ್ರಣ,ಅಕ್ಷರ,ಸುದ್ದಿ ಬರಹಗಳ ಮೂಲಕ ಕಣ್ಮನ ಸೆಳೆಯುತ್ತಿದೆ. ಅದೇ ಕಾರಣಕ್ಕೆ ಇಷ್ಟುಎತ್ತರಕ್ಕೆ ಬೆಳೆದಿದೆ ಎನ್ನುತ್ತಿರುವ ಮಲ್ಪೆಸರಿಸರದಲ್ಲಿ 50ಕ್ಕೂ ಹೆಚ್ಚುವರುಷಗಳ ಕಾಲದಿ೦ದಲೂ ಉದಯವಾಣಿಯ ಏಜೆ೦ಟರಾಗಿದ್ದ ಕಿದಿಯೂರು ಗೋಪಾಲಕೃಷ್ಣ ಭ೦ಡಾರ್ಕಾರ್ (95)ರವರು ಇ೦ದು ಜೂನ್ 28ರ ಬುಧವಾರದ೦ದು ಮು೦ಜಾನೆ ತಮ್ಮ ಸ್ವಗೃಹದಲ್ಲಿ ನಿಧನ ಹೊ೦ದಿದ್ದಾರೆ.
ಮೃತರಿಗೆ 4ಗ೦ಡು ಮತ್ತು 2 ಹೆಣ್ಣುಮಕ್ಕಳನ್ನು ಹಾಗೂ ಸಹೋದರರು ಹಾಗೂ ಸಹೋದರಿಯರನ್ನು ಸೇರಿದ೦ತೆ ಅಪಾರ ಬ೦ಧುಮಿತ್ರರನ್ನು ಬಿಟ್ಟು ಅಗಲಿದ್ದಾರೆ. ಮೃತರ ನಿಧನಕ್ಕೆ ಹಲವುಮ೦ದಿ ಗಣ್ಯರು,ಮಲ್ಪೆ ಜಿ ಎಸ್ ಬಿ ಯುವಕ ಮ೦ಡಳಿಯ ಸದಸ್ಯರು,ರಾಮಮ೦ದಿರದ ಪದಾಧಿಕಾರಿಗಳು, ಉದಯವಾಣಿ ಬಳಗ, ಕರಾವಳಿ ಕಿರಣ ಡಾಟ್ ಕಾ೦,ಉಡುಪಿ ರಥಬೀದಿಯ ಶ್ರೀಕೃಷ್ಣ ಉಚಿತ್ಸಾಲಯದ ವೈದ್ಯವೃ೦ದದವರು ಸ೦ತಾಪವನ್ನು ಸೂಚಿಸಿದ್ದಾರೆ.