
ಎಲ್ಲರೂ ಸೆಗಣಿ ತಿನ್ನೋರೆ ಇದ್ದಾರೆ- ನಿರಾಣಿ: ಹಿಂದೂ ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು-ಯತ್ನಾಳ್
ಬಾಗಲಕೋಟೆ: ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಪರಸ್ಪರ ಕೆಸರೆರೆಚಾಟ ಮುಂದುವರಿಸಿದ್ದಾರೆ.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿನ ದೇವರಂತಹ ಕಾರ್ಯಕರ್ತರು ಎಲ್ಲಿಯೂ ಸಿಗೋದಿಲ್ಲ, ನಾನು ಯಡಿಯೂರಪ್ಪ, ಅನಂತ ಕುಮಾರ್ ಜೊತೆ ಬೆಳೆದವನು, ನಾನು ನಾಲ್ಕನೇ ಲೀಡರ್. ಯಡಿಯೂರಪ್ಪ ನಮ್ಮನ್ನು ಮಂತ್ರಿ ಮಾಡಲಿಲ್ಲ. ಬೊಮ್ಮಾಯಿ ಮಾಡ್ತಿದ್ರು ಆದರೆ, ಅನುಮತಿ ಸಿಗಲಿಲ್ಲ.
ನಾವೇನು ಇಲ್ಲಿ ಗುಂಡಾಗಿರಿ ಮಾಡೋಕೆ ಬಂದಿಲ್ಲ, ಹಿಂದೂ ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು, ನಮ್ಮ ಪಾರ್ಟಿಯಲ್ಲಿದ್ದು ನಮ್ಮವರನ್ನು ಸೋಲಿಸೋದು ಆಗಬಾರದು. ರಾಜ್ಯದಲ್ಲಿ ನಮ್ಮ ಕೆಲವು ನಾಯಕರು ಮಾಡಿದ್ದು ರಾಷ್ಟ್ರೀಯ ನಾಯಕರಿಗೆ ಗೊತ್ತಿದೆ. ಬಾಗಲಕೋಟೆ ರಾಜಕಾರಣ ಹದಗೆಟ್ಟ ಹೈದರಾಬಾದ್ ಆಗಿದೆ ಎಂದರು. ಗೌಡ್ರನ್ನ ಕೆಡವೇ ಕೆಡತಿವಿ. ಮುಗಿಸೇ ಬಿಡ್ತೀವಿ ಅಂದ್ರು. ಎಲ್ಲ ಹಲ್ಕಟ್ಗಿರಿ ಮಾಡಿದರು. ಅವರು ಏನಾದ್ರೂ ನಿಮಗೆ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.