ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
‘ಕೆಲಸ ಹೇಗೆ ನಡೆಯುತ್ತಿದೆ, ದೇಶದಲ್ಲಿ ಏನಾಗುತ್ತಿದೆ’ ದೆಹಲಿಗೆ ಬಂದಿಳಿದ ಕೂಡಲೇ ಬಿಜೆಪಿ ನಾಯಕರನ್ನು ಕೇಳಿ ತಿಳಿದುಕೊಂಡ ಪ್ರಧಾನಿ ಮೋದಿ
ನವದೆಹಲಿ: ಅಮೆರಿಕ ಮತ್ತು ಈಜಿಪ್ಟ್ ದೇಶಗಳ ಪ್ರವಾಸ ಯಶಸ್ವಿಯಾಗಿ ಮುಗಿಸಿಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Narendra Modi) ಇಂದು ಸೋಮವಾರ ನಸುಕಿನ ಜಾವ ದೆಹಲಿಗೆ ಬಂದಿಳಿದರು.
ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ದೆಹಲಿಯ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್ ದೇವ್, ದೆಹಲಿಯ ಬಿಜೆಪಿ ಸಂಸದರು, ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮೊದಲಾದವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಅಮೆರಿಕ ಮತ್ತು ಈಜಿಪ್ಟ್ ದೇಶಗಳ ಪ್ರವಾಸ ವೇಳೆ ಪ್ರಧಾನಿಯವರು ಅಪಾರ ಜನಪ್ರಿಯತೆ ಗಳಿಸಿದ್ದು ಮಾತ್ರವಲ್ಲದೆ ವ್ಯಾಪಾರ, ಆಹಾರ ಭದ್ರತೆ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹಲವು ಪ್ರಯೋಜನಗಳು ಆಗಿವೆ.
ಪ್ರವಾಸ ಮುಗಿಸಿ ಬಂದಿರುವ ಪ್ರಧಾನಿಯವರು ಇಂದು ವಿಶ್ರಾಂತಿ ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಹಲವು ಪ್ರಮುಖ ಸಭೆಗಳು, ಪರಾಮರ್ಶೆ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಭಾರತದಲ್ಲಿ ಏನು ನಡೆಯುತ್ತಿದೆ?: ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಬಿಜೆಪಿ ನಾಯಕರು ಅವರನ್ನು ಗುಲಾಬಿ ನೀಡಿ ಸ್ವಾಗತಿಸಿದರು. ಆಗ ಭಾರತದಲ್ಲಿ ಏನು ನಡೆಯುತ್ತಿದೆ, ಏನಾಗುತ್ತಿದೆ ಎಂದು ಮೋದಿಯವರು ಕೇಳಿದ್ದಾರೆ.
ಅವರು ವಿಮಾನದಲ್ಲಿ ಕೆಳಗಿಳಿಯುತ್ತಿದ್ದಂತೆ ನಮ್ಮನ್ನು ಕೇಳಿದ ಮಾತು ನಾವೆಲ್ಲಾ ಹೇಗೆ ಕೆಲಸ ಮಾಡುತ್ತಿದ್ದೇವೆ ಮತ್ತು ದೇಶದಲ್ಲಿ ಏನಾಗುತ್ತಿದೆ ಎಂದು ದೆಹಲಿಯ ಸಂಸದರೊಬ್ಬರು ಹೇಳಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ 9 ವರ್ಷ ಆಡಳಿತ ನಡೆಸಿದ ಅಂಗವಾಗಿ ಬಿಜೆಪಿ ಒಂದು ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸುಶಾನ್ ಮತ್ತು ಸೇವಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜನರ ಬೆಳವಣಿಗೆ ಮತ್ತು ಅಬಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರನ್ನು ಪಕ್ಷದ ನಾಯಕರು ಜನರನ್ನು ಹೇಗೆ ತಲುಪುತ್ತಿದ್ದಾರೆ ಎಂದು ಕೇಳಿ ತಿಳಿದುಕೊಂಡರು.
ಸರ್ಕಾರದ ರಿಪೋರ್ಟ್ ಕಾರ್ಡು ಜನರನ್ನು ತಲುಪುತ್ತಿದೆಯೇ ಎಂದು ಕೇಳಿದರು. ಅಲ್ಲದೆ ಜೆ ಪಿ ನಡ್ಡಾ ಅವರ ತೆಲಂಗಾಣ ಭೇಟಿಯ ಬಗ್ಗೆ ಸಹ ಪ್ರಧಾನ ಮಂತ್ರಿಗಳು ಕೇಳಿ ತಿಳಿದುಕೊಂಡರು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸುದ್ದಿಗಾರರಿಗೆ ತಿಳಿಸಿದರು.