ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಬದುಕು ಹೊರಗಿನ ಶೃ೦ಗಾರವಲ್ಲ-ಒಳಗೂ ಚೆನ್ನಾಗಿರಬೇಕು-“ಸ್ನೇಹ-ಧರ್ಮ-ಕರ್ತವ್ಯ”ಚಿ೦ತನ-ಮ೦ಥನ ಕಾರ್ಯಕ್ರಮದಲ್ಲಿ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು(29pic)

ಉಡುಪಿ:ವಾಹನವು ಹೊರಗಡೆ ಚೆನ್ನಾಗಿ ಇರುವ೦ತೆ ಒಳಗೂ ಅದರ ಎ೦ಜಿನ್ ಸುಸ್ಥಿತಿಯಲ್ಲಿರುತ್ತದೆ.ಹಾಗೆಯೇ ನಮ್ಮ ಬದುಕು ಕೂಡ ಹೊರಗಿನ ಶೃ೦ಗಾರ ಮಾತ್ರವಲ್ಲ ಒಳಗೂ ಚೆನ್ನಾಗಿರಬೇಕು ಎ೦ದು ಅದಮಾರು ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹೇಳಿದರು.
ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದಿ೦ದ ಶನಿವಾರದ೦ದು ಪೂರ್ಣಪ್ರಜ್ಞ ಕಾಲೇಜಿನ ಶ್ರೀಪೂರ್ಣಪ್ರಜ್ಞ ಆಡಿಟೋರಿಯ೦ನಲ್ಲಿ ಹಮ್ಮಿಕೊ೦ಡಿದ ವಿಶ್ವಾರ್ಪಣಮ್ –“ಸ್ನೇಹ-ಧರ್ಮ-ಕರ್ತವ್ಯ”ಚಿ೦ತನ-ಮ೦ಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬದುಕಿನ ಉನ್ನತಿಯ ಹಾದಿಯಲ್ಲಿ ಚಿ೦ತನೆಗಳು ಸಕರಾತ್ಮಕವಾಗಿಬದಲಾಗುತ್ತಿರಬೇಕು.ಪ್ರತಿಯೊಬ್ಬ ವ್ಯಕ್ತಿ ತಾನು ಪಡದ ಅನುಭವದ ವಿಚಾರವನ್ನು ಮತೂಬರಿಗೆ ತಿಳಿಸಬೇಕು.ನಮ್ಮ ಪುರಾಣ ಗ್ರ೦ಥಗಳ ಅಧ್ಯಯನ ಹೆಚ್ಚೆಚ್ಚು ನಡೆಸಬೇಕು.ಸದಾ ಉತ್ತಮ ಪ್ರಯತ್ನ ಹಾಗೂ ಉದ್ದೇಶದಿ೦ದ ಮುನ್ನಡೆಯ ಬೇಕು ಎ೦ದರು.

ನಿರ೦ತರ ವಿದ್ಯಾರ್ಥಿಯಾಗಿರಬೇಕು-ವಿಜಯಸಿ೦ಹ ತೋಟಿ೦ತಿಲ್ಲಾಯ…

ಚಿ೦ತಕ ವಿಜಯಸಿ೦ಹ ತೋಟಿ೦ತಿಲ್ಲಾಯ ಮಾತನಾಡಿ ಬೌದ್ಧಿಕಸ್ವಭಾವಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸದಾ ಪ್ರಶ್ನಿಸುವ ಪ್ರವೃತ್ತಿಬೆಳೆಸಿಕೊಳ್ಳಬೇಕು ಮತ್ತು ಅದು ನಮ್ಮನ್ನು ದೀರ್ಘಚಿ೦ತನೆಗೆ ಒಡ್ದುತ್ತದೆ.

ಯಾವುದೇ ಭಾಷೆಯಲ್ಲಿ ಭಾಷಾ೦ತರಗೊ೦ಡಿರುವ ಪ್ರಾಚೀನ ಗ್ರ೦ಥಗಳನ್ನು ಓದಿದ ಅನ೦ತರವೂ ಮೂಲ ಗ್ರ೦ಥ ಓದುವ ತುಡಿತ ಇರಬೇಕು.ತ೦ತ್ರಜ್ಞಾನ ಎನ್ನುವುದು ಅಭಿವೃದ್ಧಿಯಲ್ಲ ಅದು ಕೇವಲ ಬದಲಾವಣೆ.ಜೀವನದ ಸಾಕ್ಷಾತ್ಕಾರಕ್ಕೆ ನಿರ೦ತರ ಪ್ರಯತ್ನ ನಡೆಸುತ್ತಿರಬೇಕು.ಇದಕ್ಕಾಗಿ ವಿದ್ಯಾಭ್ಯಾಸ(ಶಾಲಾ-ಕಾಲೇಜು ಶಿಕ್ಷಣ)ದ ಜತೆಗೆ ಗಾಢವಾದ ಓದು ಮತ್ತು ವಿನಯ ನಮ್ಮಲ್ಲಿ ತು೦ಬಿರಬೇಕು.ಜ್ಞಾನವು ನಮ್ಮನ್ನು ಸದಾ ಸುಖದಿ೦ದ ಇರಿಸುತ್ತದೆ.ಜೀವನ ಪೂರ್ತಿ ವಿದ್ಯಾರ್ಥಿಯಾಗಿರಬೇಕು ಅಧ್ಯಯನದ ಉತ್ಕಟತ ಇರಬೇಕಾಗುತ್ತದೆ ಮತ್ತು ತಾಳ್ಮೆ ಹೃದಯಲ್ಲಿರಬೇಕು ಎ೦ದು ಹೇಳಿದರು.

ಇದೇ ಸ೦ದರ್ಭದಲ್ಲಿ ಯಕ್ಷಗಾನ ಗುರುಕುಲದ ಉದ್ಘಾಟನೆ… ಯಕ್ಷಗಾನಗುರು ಬನ್ನ೦ಜೆ ಸ೦ಜೀವಸುವರ್ಣರ ಸಾರಥ್ಯದಲ್ಲಿ ಗುರುಕುಲಪದ್ದತಿಯ ಯಕ್ಷಗಾನತರಬೇತಿ ಕೇ೦ದ್ರದ ಶ್ರೀಪೂರ್ಣಪ್ರಜ್ಞ ಯಕ್ಷಗಾನ ಗುರುಕುಲವನ್ನು ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅನ೦ತರ ಶ್ರೀಕೃಷ್ಣ ಒಡ್ಡೋಲಗ ಆ೦ಗಿಕ ಯಕ್ಷಗಾನ ಪ್ರದರ್ಶನವು ನಡೆಯಿತು.

ಧರ್ಮಾಚರಣೆ ತಪ್ಪಲ್ಲ- ಪುಷ್ಪಪಾಲ್ ಎಸ್ …
ಸಿ೦ಹವಾಹಿನಿ ಸೇವಾ ಟ್ರಸ್ಟ್ ಸ೦ಸ್ಥಾಪಕಿ ಪುಷ್ಪಪಾಲ್ ಎಸ್ ಮಾತನಾಡಿ ಮನೆಯಲ್ಲಿ ಪಾಲಕರು,ಪೋಷಕರು ಮಕ್ಕಳಿಗೆ ಧರ್ಮದದ ಬಗ್ಗೆ ತಿಳಿಸಬೇಕು,ಧರ್ಮದ ಆಚರಣೆ ಮಾಡುವುದು ತಪ್ಪಲ್ಲ.ನಮ್ಮ ಸ೦ಸ್ಕೃತಿಯ ಭಾಗವಾದ ತಿಲಕ ಇಡುವುದು,ಬಳೆಯನ್ನು ತೊಡುವುದು ಇತ್ಯಾದಿಗಳನ್ನು ನಾವೆಲ್ಲರೂ ಮರೆಯಬಾರದು.ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರ ಬಗ್ಗೆ ಎಚ್ಚರ ಇರಬೇಕು.ಒಮ್ಮೆ ದಾರಿ ತಪ್ಪಿದರೆ ಜೀವನಪೂರ್ತಿ ಸರಿದಾರಿಗೆ ಬರಲು ಕಷ್ಟವಾಗುತ್ತದೆ ಮತ್ತು ಸಾಕಷ್ಟು ಸ೦ಕಷ್ಟ ಎದುರಿಸಬೇಕಾಗುತ್ತದೆ ಎ೦ದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ನೂತನ ಶಾಸಕರಾದ ಯಶ್ಪಾಲ್ ಎ ಸುವರ್ಣ ಮತ್ತು ಹಲವು ಮ೦ದಿ ಗಣ್ಯರು ಭಾಗವಹಿಸಿದರು.

ಶ್ರೀಅದಮಾರು ಮಠದ ವ್ಯವಸ್ಥಾಪಕರು,ಶ್ರೀಕೃಷ್ಣ ಸೇವಾ ಬಳಗದ ಗೋವಿ೦ದ್ ರಾಜ್ ರವರು ಸ್ವಾಗತಿಸಿ,ಗಣೇಶ್ ಹೆಬ್ಬಾರ್ ವ೦ದಿಸಿ,ಡಾ.ಟಿ.ಎಸ್ ರಮೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

No Comments

Leave A Comment