Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಅಂಬಾನಿ ಹಾಗೂ ಆದಾನಿಯನ್ನು ಬೆಳೆಸಿದ್ದೆ ಮೋದಿ ಸರಕಾರದ ಒಂಭತ್ತು ವರ್ಷದ ಸಾಧನೆ- ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ಭಾರತೀಯ ಜನತಾ ಪಕ್ಷದವರು ದೇಶದಾದ್ಯಂತ ಮೋದಿ ಸರಕಾರ 9 ವರ್ಷ ಪೂರೈಸಿದ ಬಗ್ಗೆ ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರೆ ಆದರೆ ಇವರಿಗೆ ನಾಚಿಕೆಯಾಗಬೇಕು ದೇಶದಲ್ಲಿ ಇವರು ಒಂಬತ್ತು ವರ್ಷದಿಂದ ಬಡವರಿಗಾಗಿ ಕೂಲಿ ಕಾರ್ಮಿಕರಗಾಗಿ ರೈತರಿಗಾಗಿ ಮಾಧ್ಯಮ ವರ್ಗದವರಿಗಾಗಿ ಎಲ್ಲ ಕಾರ್ಮಿಕ ವರ್ಗದವರಿಗಾಗಲಿ ಏನಾದರೂ ಅವರ ಬದುಕಿಗೆ ಒಳ್ಳೆಯದಾಗುವಂತಹ ಒಂದು ಸಣ್ಣ ಕೆಲಸವನ್ನು ಮಾಡಿದ್ದರು ದೇಶದ ಜನರು ಒಪ್ಪುತ್ತಿದ್ದರು ಆದರೆ ಏನನ್ನು ಯಾರಿಗೂ ಮಾಡದೆ ಕೇವಲ ಶ್ರೀಮಂತರಿಗಾಗಿ ಅವರ ಕೈಗೊಂಬೆಯಾಗಿ ಅವರನ್ನೇ 9 ವರ್ಷದಲ್ಲಿ ಉದ್ಧಾರ ಮಾಡಿದಂತಹ ಈ ಕೇಂದ್ರದ ಬಿಜೆಪಿ ಸರಕಾರಕ್ಕೆ ಏನು ಅರ್ಹತೆ ಇದೆ?

ನಮ್ಮ ತುಳುನಾಡಿನ ಎಲ್ಲಾ ಬ್ಯಾಂಕುಗಳನ್ನು ನಾಮಾವಶೇಷಗೊಳಿಸಿದಂತಹ ಈ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಯಾವ ರೀತಿಯ ಅರ್ಹತೆ ಇದೆ ಮಾತ್ ಎತ್ತಿದರೆ ಬೆಲೆ ಏರಿಕೆ ಬೆಲೆ ಏರಿಕೆ ಬೆಲೆ ಏರಿಕೆ ಜನಸಾಮಾನ್ಯರನ್ನು ಬೆಲೆ ಏರಿಕೆಯಿಂದ ತತ್ತರಿಸುವಂತೆ ಮಾಡಿದ ಜನಸಾಮಾನ್ಯರು ದೇಶದಲ್ಲಿ ಸಂತೋಷದಿಂದ ಬದುಕಲು ಅಸಾಧ್ಯವಾದಂತ ಪರಿಸ್ಥಿತಿಯನ್ನು ತಂದೊಡ್ಡಿ ದಂತ ನರೇಂದ್ರ ಮೋದಿಯ ಸರಕಾರ.

ಈ ಬಿಜೆಪಿಯ ಸ ರಾಕಾರಕ್ಕೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ದೇಶದ ಮತದಾರರು ಈ ಸುಳ್ಳುಗಳ ಸರದಾರರಿಗೆ ತಕ್ಕ ಉತ್ತರವನ್ನು ನೀಡಿ ಶ್ರೀಮಂತರ ಕಪಿಮುಷ್ಠಿಯಿಂದ ನಮ್ಮ ಈ ದೇಶವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಕೇಂದ್ರ ಬಿಜೆಪಿ ಸರಕಾರದ ಕಳೆದ 9 ವರ್ಷದ ಆಡಳಿತದ ವಿರುದ್ಧ ಪ್ರತಿಕ್ರಿಯಸಿದ್ದಾರೆ.

No Comments

Leave A Comment