Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಚೀನಾ: ರೆಸ್ಟೋರೆಂಟ್‌ನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ, 31 ಮಂದಿ ಸಾವು

ಯಿಂಚುವಾನ್‌: ವಾಯುವ್ಯ ಚೀನಾದ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಭಾರಿ ಅಡುಗೆ ಅನಿಲ ಸ್ಫೋಟ ಸಂಭವಿಸಿದ್ದು, ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಎಲ್ ಪಿಜಿ ಅನಿಲ ಸೋರಿಕೆಯಿಂದಾಗಿ ಯಿಂಚುವಾನ್‌ನ ಕ್ಸಿಂಕಿಂಗ್ ಜಿಲ್ಲೆಯ ಜನನಿಬಿಡ ಬೀದಿಯಲ್ಲಿ ಬುಧವಾರ ರಾತ್ರಿ 8:40 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಸ್ಫೋಟದ ಪರಿಣಾಮ 31 ಜನರು ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿ ಓರ್ವ ಸೇರಿದಂತೆ ಏಳು ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ  ಸ್ವಾಯತ್ತ ಪ್ರಾದೇಶಿಕ ಸಮಿತಿ ನಿಂಗ್ಕ್ಸಿಯಾ ಹುಯಿ ತಿಳಿಸಿದೆ.

ಚೀನಾದ ಡ್ರ್ಯಾಗನ್ ಬೋಟ್ ಉತ್ಸವದ ಎರಡು ದಿನಗಳ ರಜೆಯ ಮುನ್ನಾದಿನದಂದು ಸ್ಫೋಟ ಸಂಭವಿಸಿದೆ. ರೆಸ್ಟೊರೆಂಟ್ ಜನಸಂದಣಿಯಿಂದ ತುಂಬಿತ್ತು ಎಂದು ವರದಿಯಾಗಿದೆ.

No Comments

Leave A Comment