ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ದೇಶಾಭಿಮಾನ ಅಂದ್ರೆ ಇದೇ ಅಲ್ವಾ..: ನೇಪಾಳ ವಿರುದ್ಧದ ಪಂದ್ಯದ ಬಳಿಕ ಇಡೀ ಸ್ಟೇಡಿಯಂ ಕ್ಲೀನ್ ಮಾಡಿದ ಜಿಂಬಾಬ್ವೆ ಫ್ಯಾನ್ಸ್

ನವದೆಹಲಿ: ಐಸಿಸಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಅಭಿಮಾನಿಗಳು ನಡೆದುಕೊಂಡ ರೀತಿಗೆ ಇಡೀ ಕ್ರೀಡಾ ಜಗತ್ತು ಫಿದಾ ಆಗಿದೆ.

ಹೌದು.. ಈ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್​ಗಾಗಿ (ICC ODI World Cup) ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದೆ. ಜಿಂಬಾಬ್ವೆಯಲ್ಲಿ ಈ ಪಂದ್ಯಗಳು ನಡೆಯುತ್ತಿದ್ದು ಎರಡು ಸ್ಥಾನಕ್ಕಾಗಿ ಹತ್ತು ತಂಡಗಳು ಸೆಣೆಸಾಟ ನಡೆಸುತ್ತಿದೆ. ಈಗಾಗಲೇ ಭಾರತ, ಪಾಕಿಸ್ತಾನ ಸೇರಿದಂತೆ ಪ್ರಮುಖ 8 ತಂಡಗಳು ಕ್ವಾಲಿಫೈ ಆಗಿದೆ.

ಕ್ವಾಲಿಫೈಯರ್​ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ನೇಪಾಳ (Zimbabwe vs Nepal) ಮುಖಾಮುಖಿ ಆಗಿತ್ತು. ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ನಾಯಕ ಕ್ರೈಗ್ ಎರ್ವಿನ್ (Craig Ervine) ಹಾಗೂ ಸೀನ್ ವಿಲಿಯಮ್ಸ್ ಅವರ ಶತಕದ ನೆರವಿನಿಂದ ಜಿಂಬಾಬ್ವೆ ಅಮೋಘ ಗೆಲುವು ಕಂಡಿತು.

ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದ ಬಳಿಕ ಅಲ್ಲಿನ ಅಭಿಮಾನಿಗಳು ನಡೆದುಕೊಂಡ ರೀತಿಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಯೋಜಿಸುತ್ತಿರುವುದಕ್ಕೆ ಫ್ಯಾನ್ಸ್ ಖುಷಿ ಆಗಿದ್ದಾರೆ. ತಮ್ಮ ತಂಡವನ್ನು ಬೆಂಬಲ ನೀಡುವುದಕ್ಕೆ ಸ್ಟೇಡಿಯಂನಲ್ಲಿ ಕೂಡ ಹಾಜರಿದ್ದರು. ಇದೀಗ ಪಂದ್ಯ ಮುಗಿದ ಬಳಿಕ ಅಭಿಮಾನಿಗಳು ಮನೆಗೆ ತೆರಳುವ ಮುನ್ನ ಇಡೀ ಸ್ಟೇಡಿಯಂ ಅನ್ನು ಸ್ವಚ್ಚಗೊಳಿಸಿದ್ದಾರೆ. ಅಭಿಮಾನಿಗಳು ತಾವೇ ಖುದ್ದಾಗಿ ಕ್ರೀಡಾಂಗಣದಲ್ಲಿದ್ದ ಕಸ, ಪ್ಲಾಸ್ಟಿಕ್ ಬಾಟಲಿಗಳನ್ನು ತೆರವು ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಜಿಂಬಾಬ್ವೆ ಅಭಿಮಾನಿಗಳ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

No Comments

Leave A Comment