ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಕಾಶೀಮಠ ಸಂಸ್ಥಾನ ವೆಲ್ಫೇರ್ ಫಂಡ್ ವತಿಯಿ೦ದ ಪ್ರತಿಭಾವ೦ತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಉಡುಪಿ: ಕಾಶೀಮಠ ಸಂಸ್ಥಾನ ವೆಲ್ಫೇರ್ ಫಂಡ್ ( ರಿ ) ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಇವರ ವತಿಯಿ೦ದ ಜಿ ಎಸ್ ಬಿ ಸಮಾಜದ ವಿದ್ಯಾರ್ಥಿಗಳಿಗೆ 2021 – 22 ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿ ಯು ಸಿ ಮತ್ತು ಪದವಿ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರ ಗಳಲ್ಲಿ ಪಿ ಹೆಚ್ ಡಿ ಪದವಿ ಗಳಿಸಿದವರಿಗೆ ವಿಶೇಷ ಪುರಸ್ಕಾರ ಸಮಾರಂಭವು ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಾನುವಾರದ೦ದು ಜರಗಿತು.

ಶ್ರೀಪಾದರಿಗೆ ಪಾದ ಪೂಜೆ ನಡೆಸಿ ಫಲ ಪುಷ್ಪ ಅರ್ಪಿಸಲಾಯಿತು.

ಪೂಜ್ಯ ಸ್ವಾಮೀಜಿಯವರು ಕಲಿಕೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿ ವಿದ್ಯಾರ್ಥಿ ಜೀವನವು ಅಮೂಲ್ಯ ವಾಗಿದ್ದು ನಿತ್ಯ ಪರಿಶ್ರಮ, ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದಾಗ ವಿಶಿಷ್ಟ ಸಾಧನೆ ಮಾಡಲು ಸಾಧ್ಯ .ಹೆತ್ತವರು ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕ್ರ್ಗೂ ಪ್ರೋತ್ಸಹ ನೀಡುವಂತೆ ಅನುಗ್ರಹ ಸಂದೇಶ ನೀಡಿ ಶುಭಹಾರೈಸಿದರು. ಸಿ ಎ ಸುರೇಂದ್ರ ನಾಯಕ ಹಾಗೂ ಚೇ೦ಪಿ ಶ್ರೀಕಾಂತ್ ಭಟ್ ಪ್ರಸ್ತಾವನೆಯಲ್ಲಿ ಮಾತನಡುತ್ತಾ ಸುಮಾರು 64 ವರ್ಷ್ ಗಳ ಹಿಂದೆ ಜಿ ಎಸ್ ಬಿ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಕಾಶೀಮಠ ಹಿರಿಯ ಶ್ರೀಗಳಿಂದ ಕಾಶೀಮಠ ಸಂಸ್ಥಾನ ವೆಲ್ಫೇರ್ ಫಂಡ್ ( ರಿ ) ಉಡುಪಿಯಲ್ಲಿ ಸ್ಥಾಪನೆ ಗೊಂಡಿತು.

ಇದರ 27 ಶಾಖೆ ಗಳು ಕರ್ನಾಕಟ , ಕೇರಳ , ಗೋವಾ , ಮಹಾರಾಷ್ಟ್ರ ಗಳ್ಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು ದಾನಿಗಳ ಸಹಕಾರದಲ್ಲಿ ಈ ಬಾರಿ ಸುಮಾರು 86 ವಿದ್ಯಾರ್ಥಿಗಳು ಪುರಸ್ಕಾರ ಪಡೆದುಕೊಂಡರು ವೇದಿಕೆಯಲ್ಲಿ ಸಮಿತಿಯ ಸದಸ್ಯರಾದ ಕೋಟೇಶ್ವರ ಶ್ರೀಧರ್ ಕಾಮತ್ , ಪುಂಡಲೀಕ ಕಾಮತ್ , ರೋಹಿತಾಕ್ಷ ಪಡಿಯಾರ್ , ಸಿ ಎ ಗುರುದಾಸ್ ಶೆಣೈ , ಪ್ರಭಾಕರ್ ಪೈ , ದೀಪಕ್ ಶೆಣೈ , ಮೋಹನದಾಸ್ ಕಾಮತ್ , ಉಪಾಧ್ಯಕ್ಷರು ದೇವಳದ ಆಡಳಿತ ಮೊಕ್ತೇಸರ ಪಿ ವಿ ಶೆಣೈ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಶೆಣೈ ವರದಿ ವಾಚಿಸಿದರು.ಶ್ರೀನಿವಾಸ ಪ್ರಭು ವಂದಿಸಿ, ಶ್ರೀಧರ್ ಪೈ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment