ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್‌ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...

ಸರ್ಕಾರಿ ಆಸ್ಪತ್ರೆ ಜವಾನನ ಮಗಳಿಗೆ 14 ಚಿನ್ನದ ಪದಕ; ಅಪ್ಪನ ಕೀರ್ತಿ ಹೆಚ್ಚಿಸಿದ ಯುವತಿ

ಕಲಬುರಗಿ: ಸಾಧನೆ ಮಾಡೋ ಮನಸು ಇದ್ದರೆ ಬಡತನ ಅಡ್ಡಿಯಾಗಲಾರದು. ಜೀವನದಲ್ಲಿ ಸಾಧಿಸುವ ಛಲವೊಂದಿದ್ದರೆ ಸಾಕು. ಹೌದು ಸರ್ಕಾರಿ ಆಸ್ಪತ್ರೆಯಲ್ಲಿ(Government Hospital Jawan) ಕಸ ಗೂಡಿಸುವುದು ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡೋ ಜವಾನನ ಮಗಳು ಕಷ್ಟ ಪಟ್ಟು ಓದಿ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದಿದ್ದಾರೆ(14 Gold Medals).

ಕಲಬುರಗಿ ನಗರದಲ್ಲಿರೋ ಗುಲಬರ್ಗಾ ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವ ಕಾರ್ಯಕ್ರಮ ವಿವಿಯ ಅಂಬೇಡ್ಕರ್ ಸಭಾಂಗಣದಲ್ಲಿ ಇಂದು(ಜೂನ್ 19) ನಡೆಯಿತು. ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್, ಉನ್ನಕ ಶಿಕ್ಷಣ ಸಚಿವ ಡಾ.ಸುಧಾಕರ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಚಿನ್ನದ ಪದಕ, ಪಿಎಚ್ ಡಿ ಪದವಿ, ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಲಾಯಿತು.

ಜವಾನನ ಮಗಳಿಗೆ ಹದಿನಾಲ್ಕು ಚಿನ್ನದ ಪದಕ

ಗುಲಬರ್ಗಾ ವಿವಿಯ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ರುಕ್ಮಿಣಿ ಹಣಮಂತರಾಯ್ ಬರೋಬ್ಬರಿ ಹದಿನಾಲ್ಕು ಚಿನ್ನದ ಪದಕ ಪಡೆದು, ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷವೆಂದರೇ ಹದಿನಾಲ್ಕು ಚಿನ್ನದ ಪದಕ ಪಡೆದ ರುಕ್ಮಿಣಿ ತಂದೆ ಹಣಮಂತರಾಯ್, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದಾರೆ.

14 ಚಿನ್ನದ ಪದಕ ಪಡೆದ ರುಕ್ಮಿಣಿ ಗೆ ಉಪನ್ಯಾಸಕಿಯಾಗೋ ಕನಸು

ಇನ್ನು ಗುಲಬರ್ಗಾ ವಿವಿಯ ಘಟಿಕೋತ್ಸವದಲ್ಲಿ ಹದಿನಾಲ್ಕು ಚಿನ್ನದ ಪದಕ ಪಡೆದ ರುಕ್ಮಿಣಿ ಹಣಮಂತರಾಯ್ ಗೆ ಕಾಲೇಜು ಉಪನ್ಯಾಸಕಿಯಾಗೋ ಕನಸು ಹೊಂದಿದ್ದಾರೆ. ಮುಂದೆ ಚೆನ್ನಾಗಿ ಓದಿ ಪಿಹೆಚ್​ಡಿ ಮಾಡಬೇಕು, ಕಾಲೇಜು ಉಪನ್ಯಾಸಕಿಯಾಗಬೇಕು ಅನ್ನೋ ಆಸೆಯಿದೆ ಅಂತಿದ್ದಾರೆ ರುಕ್ಮಿಣಿ. ಇನ್ನು ಗುಲಬರ್ಗಾ ಸ್ನಾತಕೋತ್ತರ ಕೇಂದ್ರ ದಲ್ಲಿ ಅಧ್ಯಯನ ಮಾಡುವಾಗ ಹೆಚ್ಚಿನ ಸಮಯ ಗ್ರಂಥಾಲಯ ಮತ್ತು ವಿಭಾಗದಲ್ಲಿ ಕಳೆದಿದ್ದೇನೆ. ಬಿಡುವು ಇದ್ದಾಗಲೆಲ್ಲಾ ಓದುತ್ತಿದ್ದೆ ಇದರಿಂದ ಹೆಚ್ಚಿನ ಚಿನ್ನದ ಪದಕ ಪಡೆಯಲು ಸಾಧ್ಯವಾಗಿದೆ. ಇದು ಸಂತಸ ತಂದಿದೆ ಎಂದು ರುಕ್ಮಿಣಿ ಸಂತಸ ಹಂಚಿಕೊಂಡಿದ್ದಾರೆ.

ಅತಿ ಹೆಚ್ಚು ಚಿನ್ನದ ಪದಕ ಪಡೆದು ಸಾಧನೆ ಮಾಡಿರೋ ರುಕ್ಮಿಣಿ, ನನ್ನ ಸಾಧನೆಗೆ ಹೆತ್ತವರ ಸಹಕಾರ, ವಿಭಾಗದ ಉಪನ್ಯಾಸಕರ ಸಹಕಾರವಿದೆ. ಅವರೆಲ್ಲರ ಪ್ರೇರಣೆ, ಮಾರ್ಗದರ್ಶನವೇ ಈ ಸಾಧನೆಗೆ ಕಾರಣವಾಗಿದೆ ಎಂದರು.

ಇನ್ನು ರುಕ್ಮಿಣಿ ತಂದೆ ಹಣಮಂತರಾಯ್ ಮಾತನಾಡಿ, ನಾನು ಓದಿದ್ದು ಮೂರನೇ ತರಗತಿ. ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನಾಗಿದ್ದೇನೆ. ಮಗಳ ಸಾಧನೆ ಖುಷಿ ತಂದಿದೆ ಎಂದು ಖುಷಿ ಪಟ್ಟಿದ್ದಾರೆ.

No Comments

Leave A Comment