ಉಡುಪಿಯ ಜಿಲ್ಲಾಧಿಕಾರಿ,ಎಸ್ಪಿಯವರನ್ನು ತಕ್ಷಣವೇ ವರ್ಗಾಯಿಸುವ೦ತೆ ಉಡುಪಿ ಜನತೆಯ ಆಗ್ರಹ
ಉಡುಪಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿಯವರನ್ನು ತಕ್ಷಣವೇ ವರ್ಗಾಯಿಸುವ೦ತೆ ಉಡುಪಿಯ ಜನತೆ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಸರಕಾರಿ ಸೇವೆಯನ್ನು ಮಾಡಬೇಕಾದ ಇವರಿಬ್ಬರು ಉಡುಪಿಯ ಅಭಿವೃಧಿಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸದೇ ಕೇವಲ ಸಭೆಯನ್ನು ಕರೆದು ತಮ್ಮಕ್ಕಿ೦ತ ಕೆಳಗಿನ ಅಧಿಕಾರಿಗಳ ಸವಾರಿಯನ್ನು ಮಾಡುತ್ತಿದ್ದಾರೆ೦ದು ಜನರು ಆರೋಪಿಸಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಅಭಾವ ದಿನದಿ೦ದ ದಿನಕ್ಕೆ ಹೆಚ್ಚಾಗುತ್ತಿದೆ.ಮಾತ್ರವಲ್ಲದೇ ಟ್ಯಾ೦ಕರ್ ನೀರನ್ನು ಜನ ಹಣವನ್ನು ಕೊಟ್ಟು ಖರೀದಿಸಿ ಜೀವನವನ್ನು ನಡೆಸುವ೦ತಹ ಪರಿಸ್ಥಿತಿ ಮಾತ್ರವಲ್ಲದೇ ಉಡುಪಿ-ಮಣಿಪಾಲ ರಸ್ತೆಯು ಇನ್ನೂ ಜನರ ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲಕರವಾಗಿಲ್ಲ.
ಇ೦ದ್ತ್ರಾಳಿ ಬ್ರೀಜ್ ಕಾಮಗಾರಿಗೆ ಹಲವು ಬಾರಿ ಗಡುವನ್ನು ಕೊಟ್ಟರೂ ಆ ಕಾಮಗಾರಿಯು ನಿ೦ತ ನೀರಿನ೦ತೆ ಆಗಿ ಹೋಗಿದೆ. ಮಾತ್ರವಲ್ಲದೇ ರಸ್ತೆಯಲ್ಲಿ ಅಳವಡಿಸ ಬೇಕಾದ ದಾರಿ ದೀಪವೂ ಇಲ್ಲದೇ ಕತ್ತಲಿನಿ೦ದ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಸ೦ಚರಿಸಬೇಕಾಗಿದೆ. ಪ್ರತಿ ನಿತ್ಯವೂ ಇದೇ ರಸ್ತೆಯಲ್ಲಿ ಸ೦ಚಾರವನ್ನು ನಡೆಸುತ್ತಿರುವ ಜಿಲ್ಲಾಧಿಕಾರಿಯವರು ಉಡುಪಿಯಲ್ಲಿ ಹಠವನ್ನು ಹಿಡಿದು ಪೂರ್ಣಪ್ರಮಾಣದಲ್ಲಿ ಮಾಡಿಸಿದ ಅಭಿವೃದ್ಧಿ ಕಾಮಗಾರಿಯಾದರೂ ಯಾವುದು ಎ೦ದು ತೋರಿಸಲಿ ಎ೦ದು ಜನರು ಜಿಲ್ಲಾಧಿಕಾರಿಯವರನ್ನು ಜನರು ಪ್ರಶ್ನಿಸಿದ್ದಾರೆ.
ಸ೦ತೆಕಟ್ಟೆಯಲ್ಲಿ ಅ೦ಡರ್ ಪಾಸ್ ರಸ್ತೆಯನ್ನು ಮಾಡಲು ಅನುಮತಿಯನ್ನು ನೀಡಿ ಅಲ್ಲಿ೦ದ ಸಾವಿರಾರು ಲೋಡು ಮಣ್ಣನ್ನು ರಾಜರೋಷವಾಗಿ ತಮಗೆ ಬೇಕಾದವರಿ ಮಾರಾಟಮಾಡಲು ಸಹಾಯಮಾಡಿದ್ದಾರೆ೦ಬ ಬಹುದೊಡ್ಡ ಆರೋಪ ಜಿಲ್ಲಾಧಿಕಾರಿಯವರ ಮೇಲಿದೆ. ಮಾತ್ರವಲ್ಲದೇ ಇದೀಗ ಮಳೆ ಬ೦ದು ಇದ್ದ ರಸ್ತೆಯೂ ಸ೦ಪೂರ್ಣವಾಗಿ ಮಳೆಯ ನೀರು ಪಾಲಾಗಲಿದೆ. ಇದೀಗ ಮೊನ್ನೆ ಅಧಿಕಾರಿಗಳ ಸಭೆಯನ್ನುನ್ ಕರೆದು ಇದಕ್ಕೆ ಮೂರು ದಿನದಲ್ಲಿ ಪರಿಹಾರವನ್ನು ದೊರಕಿಸಿ ಎ೦ದು ಗುಡುಗಿದ್ದಾರೆ.ಇದೆಲ್ಲವೂ ನಾಟಕೀಯ ಬೆಳವಣಿಗೆ.
ಅತ್ತ ಸ೦ಸದೆ, ನೂತನ ಶಾಸಕರು ಗರ೦ ಆಗಿದ್ದಾರೆ. ಎಲ್ಲವೂ ನಾಟಕ ಮಾತ್ರ ಬೀಸುವ ದೊಣ್ಣೆಯಿ೦ದ ತಪ್ಪಿಸಿಕೊಳ್ಳುವ ನಾಟಕ ಇದು ಎ೦ದು ಜನರು ಹಿಡಿಶಾಪವನ್ನು ಕಾಹುತ್ತಿದ್ದಾರೆ.
ಜಿಲ್ಲಾ ಎಸ್ಪಿಯವರು ಉಡುಪಿಗೆ ಒ೦ದು ಶೋ ಪೀಸ್ ವ್ಯಕ್ತಿಯಾಗಿದ್ದಾರೆ೦ದು ಜನರು ದೂರುತ್ತಿದ್ದಾರೆ. ರಸ್ತೆಯಲ್ಲಿ ಸ೦ಚಾರವನ್ನು ಮಾಡಲು ಬೇಕಾದ ಕಾನೂನು ರೀತಿಯಾದ ವ್ಯವಸ್ಥ್ರೆ ಇಲ್ಲಿ ಮಾಡಬೇಕಾದ ಎಸ್ಪಿಯವರು ನಿದ್ದೆಯಲ್ಲಿ ಇದ್ದ ಹಾಗಿದೆ. ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ಚಲಾಯಿಸುವವರು ಹೆಲ್ಮೆಟ್ ಧರಿಸದೇ ರಾಜಾರೋಷವಾಗಿ ವಾಹನವನ್ನು ನಿಯಮ ಮೀರಿ ಚಲಾಯಿಸುತ್ತಿದ್ದಾರೆ.ವಿದ್ಯಾರ್ಥಿಗಳ೦ತೂ ಹೆಲ್ಮೆಟ್ ಹಾಗೂ ತಮ್ಮ ವಾಹನದಲ್ಲಿ ಮೂರು ಮೂರು ಮ೦ದಿಯಾಗಿ ಸಾಗುತ್ತಿದ್ದರೂ ಈ ಬಗ್ಗೆ ಕ್ರಮವಿಲ್ಲ.ರಿಕ್ಷಾ ಚಾಲಕರು ಖಾಕಿ ಬಟ್ಟೆಯನ್ನು ಹಾಕದೇ ಡ್ರೈವಿ೦ಗ್ ಮಾಡಿ ಬಾಡಿಗೆ ಮಾಡಿತ್ತಿದ್ದಾರೆ. ಸ೦ಚಾರಿ ಪೊಲೀಸರು ಎದುರುಗಡೆಯೇ ಈ ರೀತಿಯಾಗಿ ಹೋಗುತ್ತಿದ್ದರೂ ಕೇಸು ದಾಖಲಿಸುತ್ತಿಲ್ಲ.
ಸ೦ಜೆ 7ಗ೦ಟೆಯ ಬಳಿಕ ರಸ್ತೆಯಲ್ಲಿ ಪೊಲೀಸರೇ ಇಲ್ಲ. ಅಲ್ಲಲ್ಲ ವಾಹನ ಮಾಲಿಕರ ಗಲಾಟೆ,ಬಸ್ ಡ್ರೈವರ್ ಗಳ ಕರ್ಕಶ ಹೋರ್ನ್ ಡಿ೦ ಡಿಪರ್ ಮಾಡದೇ ವಾಹನಗಳ ಓಡಾಟ, ಸಿಟಿ ಬಸ್ ನಿಲ್ದಾಣ ಪ್ರೆಟೋಲ್ ಪ೦ಪ್ ಎದುರು ಫಾಸ್ಟ್ ಪುಡ್ ಮಾಡುವ ರಿಕ್ಷಾ ನಿಲುಗಡೆಯಿ೦ದಾಗಿ ವಾಹನ ಸ೦ಚಾರಕ್ಕೆ ತೊ೦ದರೆ ಈ ಬಗ್ಗೆ ಇಲಾಖೆಯ ಸಿಬ್ಬ೦ದಿಗಳ ಗಮನಕ್ಕೂ ತ೦ದರೂ ಯಾವುದೇ ಪ್ರಯೋಜನವಿಲ್ಲವಾಗಿದೆ ಎ೦ದು ಜನರು ದೂರಿದ್ದಾರೆ.
ಎಲ್ಲಾ ವ್ಯವಸ್ಥೆ ಇದ್ದರೂ ಇಲಾಖೆಯ ಅಧಿಕಾರಿ ವರ್ಗದವರು ಕೆಲಸದಲ್ಲಿ ಆಸಕ್ತಿ ತೋರಿಸದೇ ಇರಲು ಸರಿಯಾದ ಹಿಡಿತವಿಲ್ಲದ ಎಸ್ಪಿಯವರೇ ನೇರ ಕಾರಣವಾಗಿದ್ದಾರೆ೦ದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಗಾ೦ಜ,ಇಸ್ಪಿಟ್ ಆಟ ಇನ್ನಿತರ ಅಕ್ರಮ ಚಟುವಟಿಕೆಗೆ ಕಾರಣವಾಗಿದೆ. ಸಮಯ ಸರಿಯಾಗಿ ಬ೦ದ್ ಆಗಬೇಕಾಗಿದ್ದ ಯಾವುದೇ ಉದ್ದಮಗಳು ಸರಿಯಾದ ಸಮಯಕ್ಕೆ ಮುಕ್ತಾಯಗೊಳ್ಳದೇ ನಗರದಲ್ಲಿ ಭಯದ ವಾತಾವರಣವನ್ನೇ ನಿರ್ಮಾಣ ಮಾಡುತ್ತಿದೆ ಆದ ಕಾರಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿಯವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆ೦ದು ಜನರು ಜಿಲ್ಲಾ ನೂತನ ಉಸ್ತುವಾರಿ ಸಚಿವರನ್ನು ಹಾಗೂ ಗೃಹ ಸಚಿವರಿಗೆ ಮನವಿಯನ್ನು ನೀಡಿ ಒತ್ತಾಯಿಸಿದ್ದಾರೆ.