ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಕಾಪು: ಅಪಾರ್ಟ್‌ಮೆಂಟ್ ಕಂಪೌಂಡ್ ಕುಸಿತ – ರಿಕ್ಷಾ, ಬೈಕ್‌ಗಳಿಗೆ ಹಾನಿ

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾ ಜಖಂಗೊಂಡಿದೆ.

ರವಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಎರಡು ಬೈಕ್, ಮತ್ತು ಸ್ಕೂಟಿ ಸಂಪೂರ್ಣ ಮಣ್ಣಿನಡಿ ಸಿಲುಕಿದ್ದು, ರಿಕ್ಷಾ ಕಂಪೌಂಡ್ ಕುಸಿತದ ರಭಸಕ್ಕೆ ಮುಂದೆ ಚಲಿಸಿ, ಹಾನಿಗೀಡಾಗಿದೆ.

ಫೇಮಸ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬವರ ಬೈಕ್ ಮತ್ತು ಶರೀಪ್ ಎಂಬವರ ರಿಕ್ಷಾ ಹಾನಿಗೊಳಗಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.

ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು ಈ ವೇಳೆ ಸಮರ್ಪಕ ರೀತಿಯಲ್ಲಿ ಫಿಲ್ಲಿಂಗ್ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್ ಮಾಲಕರು ಮತ್ತು ನಿವಾಸಿಗಳು ದೂರಿದ್ದಾರೆ.

No Comments

Leave A Comment